` ಶಿವರಾಜ್ ಕುಮಾರ್ ಕೋಪಕ್ಕೆ ಅದೇ ಕಾರಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar's kavacha
Shivarajkumar Image

ಶಿವ ರಾಜ್‍ಕುಮಾರ್ ಕೋಪ ಮಾಡಿಕೊಳ್ಳೋದು ಕಡಿಮೆ. ಆದರೆ, ಇತ್ತೀಚೆಗೆ ಅವರಲ್ಲಿ ಕೋಪ ಜಾಸ್ತಿಯಾಗಿದೆಯಂತೆ. ಅದರಲ್ಲೂ ಕವಚ ಚಿತ್ರೀಕರಣದ ವೇಳೆ ಹಲವರ ಮೇಲೆ ಕೂಗಾಡಿದ್ದಾರೆ ಶಿವಣ್ಣ. ಅದರ ಕಾರಣವನ್ನೂ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಕವಚ ಚಿತ್ರ ರೀಮೇಕ್ ಸಿನಿಮಾ. ವೊರಿಜಿನಲ್ ಸಿನಿಮಾ, ಕಥೆ ಇಷ್ಟವಾಗಿ, ರೀಮೇಕ್ ಮಾಡಲ್ಲ ಎನ್ನುವ ಪ್ರತಿಜ್ಞೆ ಮುರಿದು ಒಪ್ಪಿಕೊಂಡ ಸಿನಿಮಾ. ಈ ಸಿನಿಮಾದಲ್ಲಿ ನನ್ನದು ಅಂಧನ ಪಾತ್ರ. ಅಂಧನ ಪಾತ್ರ ನನಗೂ ಹೊಸದು. ಶೂಟಿಂಗ್ ವೇಳೆ ಯಾವಾಗಲೂ ಕಣ್ಣುಗಳನ್ನು ಮೇಲೆತ್ತಿಕೊಂಡೇ ಇರಬೇಕು. ಒಂದೇ ಸಮನೆ ಹಾಗೆ ಕಣ್ಣುಗಳನ್ನು ಮೇಲೆತ್ತಿಕೊಂಡರೆ ತಲೆನೋವು ಗ್ಯಾರಂಟಿ. ತಲೆನೋವು ಹೆಚ್ಚಾಗಿ, ಕೋಪ ಬಂದು ಹಲವರಿಗೆ ಬೈದು ಬಿಟ್ಟಿದ್ದೇನೆ. ಕಿರಿಕಿರಿಯಾಗಿ ಜಗಳ ಮಾಡಿಕೊಂಡಿದ್ದೇನೆ. ಅದು ಬೇಸರವಾಗಿದ್ದರೆ ಮನ್ನಿಸಿಬಿಡಿ ಎಂದಿದ್ದಾರೆ ಶಿವರಾಜ್ ಕುಮಾರ್.

ಕವಚ ಮೂಲತಃ ಮಲಯಾಳಂ ಸಿನಿಮಾ. ಮೋಹನ್‍ಲಾಲ್ ಮಾಡಿದ್ದ ಪಾತ್ರವನ್ನು ಶಿವರಾಜ್‍ಕುಮಾರ್ ಮಾಡುತ್ತಿದ್ದಾರೆ. ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಸಿನಿಮಾ.