ನಿಖಿಲ್ ಕುಮಾರಸ್ವಾಮಿ ಅಭಿಯನದ `ಸೀತಾರಾಮ ಕಲ್ಯಾಣ' ಚಿತ್ರದ ಟೀಸರ್‍ನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮುಂಡೇಶ್ವರಿ ಅಮ್ಮನವರ ಕರಗದ ವಿಶೇವಾಗಿ ಹೊರಬಂದಿದೆ ಚಿತ್ರದ ಟೀಸರ್. ಎತ್ತುಗಳ ಜೊತೆ ಓಟ, ಕಾರುಗಳ ಸ್ಫೋಟ, ತ್ರಿಶೂಲ ಹಿಡಿದು ನಿಲ್ಲುವ ನಾಯಕ.. ಹೀಗೆ ಹೀರೋ ನಿಖಿಲ್‍ರನ್ನು ದುಷ್ಟರನ್ನು ಸದೆಬಡಿಯುವವರನ್ನಾಗಿ ತೋರಿಸಲಾಗಿದೆ.
ಟೀಸರ್‍ನಲ್ಲಿ ಬರೀ ಫೈಟಿಂಗ್ ತೋರಿಸಿದ್ದಾರೆ ಅಂತಾ ಇದು ಫೈಟಿಂಗ್ ಸಿನಿಮಾ ಅಂದ್ಕೋಬೇಡಿ. ಇದೊಂದು ಕೌಟುಂಬಿಕ ಚಿತ್ರ. ತಂದೆ-ಮಗ, ತಂದೆ-ಮಗಳ ಬಾಂಧವ್ಯದ ಕುರಿತು ಇರುವ ಚಿತ್ರ. ಚಿತ್ರವನ್ನು ನೋಡಿ ಹಾರೈಸಿ ಎಂದು ಕೇಳಿಕೊಂಡರು ಕುಮಾರಸ್ವಾಮಿ.
ಈಗಾಗಲೇ 92 ದಿನದ ಶೂಟಿಂಗ್ ಮುಗಿದಿದೆ. ಇನ್ನೂ 30 ದಿನಗಳ ಶೂಟಿಂಗ್ ಬಾಕಿ ಇದೆ. ಶೀಘ್ರದಲ್ಲೇ ಆಡಿಯೋ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು ನಿಖಿಲ್ ಕುಮಾರಸ್ವಾಮಿ.
ನಿರ್ದೇಶಕ ಹರ್ಷ, ರಚಿತಾ ರಾಮ್, ಚಿಕ್ಕಣ್ಣ ಸೇರಿದಂತೆ ಚಿತ್ರತಂಡದ ಕಲಾವಿದರು, ತಂತ್ರಜ್ಞರು ವೇದಿಕೆಯಲ್ಲಿ ಕಂಗೊಳಿಸಿದರು.