ದರ್ಶನ್ ಅಭಿನಯದ 52ನೇ ಸಿನಿಮಾಗೆ ಒಡೆಯರ್ ಅನ್ನೋ ಟೈಟಲ್ ಇಡಲಾಗಿದೆ ಎಂಬ ಸುದ್ದಿ ಹೊರಬಿದ್ದ ತಕ್ಷಣ ಮೈಸೂರಿನ ಕನ್ನಡಪರ ಸಂಘಟನೆಯೊಂದು ಆಕ್ಷೇಪ ವ್ಯಕ್ತಪಡಿಸಿತ್ತು. ಒಡೆಯರ್ ಎಂದರೆ ಕನ್ನಡ ನಾಡಿನ ಹೆಮ್ಮೆ. ಅಂತಹವರ ಹೆಸರನ್ನು ರೌಡಿಸಂ ಕಥೆಯಿರುವ ಚಿತ್ರಗಳಿಗೆ ಇಟ್ಟು ಅವಮಾನಿಸಬೇಡಿ ಎಂದಿತ್ತು. ಕಾನೂನು ಹೋರಾಟದ ಸೂಚನೆಯನ್ನೂ ಕೊಟ್ಟಿತ್ತು. ಆದರೆ, ಈಗ ರಾಜಮಾತೆಯೇ ಒಡೆಯರ್ ಅನ್ನೋ ಟೈಟಲ್‍ಗೆ ಓಕೆ ಎಂದಿದ್ದಾರೆ.
ಒಡೆಯರ್ ಅನ್ನೋ ಹೆಸರು ನಮಗೆ ಬಳುವಳಿಯಾಗಿ ಬಂದಿದ್ದು. ಒಡೆಯರ್ ಅನ್ನೋ ಹೆಸರನ್ನು ತುಂಬಾ ಜನ ಇಟ್ಟುಕೊಂಡಿದ್ದಾರೆ. ಚಿತ್ರಕ್ಕೆ ಒಡೆಯರ್ ಅನ್ನೋ ಹೆಸರು ಇಟ್ಟಿರುವುದಕ್ಕೆ ನನ್ನ ಆಕ್ಷೇಪವೇನೂ ಇಲ್ಲ. ಒಡೆಯರ್ ಅನ್ನೋ ಹೆಸರಿಟ್ಟು, ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಬಾರದು ಅಷ್ಟೆ.
ಇದು ಮೈಸೂರು ರಾಜವಂಶದ ರಾಜಮಾತೆ ಪ್ರಮೋದಾದೇವಿ ಒಡೆಯರ್ ನೀಡಿರುವ ಸ್ಪಷ್ಟನೆ. ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿರುವ, ಕಾನೂನು ಹೋರಾಟ ನಡೆಸುವುದಾಗಿ ಹೇಳಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ ಪ್ರಮೋದಾದೇವಿ ಒಡೆಯರ್.