` ನೋಟ್‍ಬ್ಯಾನ್ ಸ್ಟೇಟ್‍ಮೆಂಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
statement movie about noteban to release this week
Statement Movie Image

ನೋಟ್‍ಬ್ಯಾನ್. ಇದು 2016-17ರಲ್ಲಿ ಕರಾಳದಂಧೆಯಲ್ಲಿ ನೋಟುಗಳನ್ನು ರಾಶಿ ಹಾಕಿದ್ದವರ ಎದೆನಡುಗಿಸಿತ್ತು. ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಸಾರಿದ್ದ ಸಮರ, ಕಪ್ಪು ಕುಬೇರರನ್ನು ಬೆಚ್ಚಿಬೀಳಿಸಿತ್ತು. ಆದರೆ, ಅದರ ನಡುವೆಯೂ ಕಳ್ಳಕಾಕರು, ರಂಗೋಲಿ ಕೆಳಗೆ ತೂರಿದ್ದರು.

ಸ್ಟೇಟ್‍ಮೆಂಟ್ ಸಿನಿಮಾದ ಕಥೆಯೇ ಅದು. ಕಳ್ಳರು ಕಂಡುಕೊಂಡ ಅಡ್ಡಮಾರ್ಗಗಳ ಕುರಿತೇ ಸಿನಿಮಾ ಮಾಡಲಾಗಿದೆ. 

ಕಪ್ಪು ಕುಳಗಳು, ಭೂಗತ ಲೋಕ, ಬ್ಯಾಂಕ್‍ಗಳ ನೆಟ್‍ವರ್ಕ್ ಹೇಗೆ ಕೆಲಸ ಮಾಡಿತು ಅನ್ನೋದೇ ಚಿತ್ರದ ಕಥೆ. ವೇಣು ಅವರು ನಿರ್ಮಾಣ ಮಾಡಿರೋ ಸಿನಿಮಾಗೆ ಅಪ್ಪಿ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ.