` ರಂಗಿತರಂಗ ರಾಧಿಕಾ ಡಿಶುಂ ಡಿಶುಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika chethan to perform stunts for chase
Radhika Chethan Image

ರಂಗಿತರಂಗದ ಮುಗುಳ್ನಗೆಯ ಸುಂದರಿ ರಾಧಿಕಾ ಚೇತನ್. ಯುಟರ್ನ್, ಕಾಫಿತೋಟ, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ.. ಹೀಗೆ ಪ್ರಯೋಗಾತ್ಮಕ ಚಿತ್ರಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿರುವ ರಾಧಿಕಾ ಚೇತನ್, ಈಗ ಚೇಸ್ ಚಿತ್ರಕ್ಕಾಗಿ ಸಾಹಸವನ್ನೂ ಮಾಡಿದ್ದಾರೆ. ಚಿತ್ರದಲ್ಲಿನ ಸಾಹಸ ದೃಶ್ಯಗಳಿಗಾಗಿ ರಾಧಿಕಾ, ಸಮರ ಕಲೆ ಕಲಿತಿದ್ದಾರಂತೆ. ಸಾಹಸ ನಿರ್ದೇಶಕರಾದ ಡೆಲ್ಸನ್ ಮತ್ತು ಚೇತನ್ ಡಿಸೋಜಾ ಅವರೇ ತರಬೇತಿಯನ್ನೂ ಕೊಟ್ಟಿದ್ದಾರಂತೆ.

ಒಂದು ವಾರ ತರಬೇತಿ ಪಡೆದು ನಟಿಸಿದ್ದೇನೆ. ಆ್ಯಕ್ಷನ್ ದೃಶ್ಯಗಳು ಹೆಚ್ಚೇನೂ ಇಲ್ಲ. ಆದರೆ, ಅದಕ್ಕಾಗಿ ಶ್ರಮ ಪಟ್ಟಿದ್ದೇನೆ. ಏಕೆಂದರೆ ಆ್ಯಕ್ಷನ್ ಸೀನ್‍ಗಳು ಬೇರೆಯದ್ದೇ ಬಾಡಿ ಲಾಂಗ್ವೇಜ್ ಕೇಳುತ್ತವೆ. ಅಷ್ಟೇ ಅಲ್ಲ, ಈ ಚಿತ್ರದೊಂದಿಗೆ ನನಗೆ ನಾಯಿಗಳ ಬಗ್ಗೆ ಇದ್ದ ಭಯವೂ ದೂರವಾಗಿದೆ ಎಂದು ಹೇಳಿಕೊಂಡಿದ್ದಾರೆ ರಾಧಿಕಾ ಚೇತನ್.