ಒಂದೊಂದೇ ಹಾಡಿನ ಮೂಲಕ ವಿಲನ್ ಹವಾ ಎಬ್ಬಿಸುತ್ತಿರುವ ಜೋಗಿ ಪ್ರೇಮ್, ಈಗ 3ನೇ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. 3ನೇ ಹಾಡು ಆಗಸ್ಟ್ 4ನೇ ತಾರೀಕು ಅಂದರೆ ಇದೇ ಶನಿವಾರ ಬಿಡುಗಡೆಯಾಗಲಿದೆ. ಮೊದಲ ಎರಡೂ ಹಾಡುಗಳು ಹೀರೋ ಇಮೇಜ್ ಸುತ್ತಮುತ್ತ ಇದ್ದಂಥವು. ಆದರೆ, 3ನೇ ಹಾಡು ಪಕ್ಕಾ ಲವ್ ಸಾಂಗ್ ಎನ್ನುವ ಸುಳಿವು ಸಿಕ್ಕಿದೆ.
ಲವ್ ಆಗೋಯ್ತು ನಿನ್ನ ಮ್ಯಾಲೆ.. ಅನ್ನೋ ಹಾಡದು. ಅಫ್‍ಕೋರ್ಸ್... ಹುಳ ಬಿಡುವ ಟೆಕ್ನಾಲಜಿಯನ್ನು ಪ್ರೇಮ್ ಇಲ್ಲೂ ಬಿಟ್ಟಿಲ್ಲ. ಹಾಡು ರಿಲೀಸ್ ಆಗಲಿದೆ ಎಂದು ಹೇಳಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರೂ ಆ್ಯಮಿ ಜಾಕ್ಸನ್ ಜೊತೆ ಇರುವ ಎರಡು ಪೋಸ್ಟರ್ ಬಿಟ್ಟಿದ್ದಾರೆ ಪ್ರೇಮ್. ಹಾಗಾದರೆ, ಹಾಡು ಯಾರ ಮೇಲೆ..? ಹೋಗಲಿ.. ಇದು ತ್ರಿಕೋನ ಪ್ರೇಮಕಥೆನಾ..?
ನಿಮ್ಮ ತಲೆಯಲ್ಲಿ ಪ್ರಶ್ನೆ ಹುಟ್ಟಿದವು ತಾನೇ. ಪ್ರೇಮ್‍ಗೆ ಬೇಕಾಗಿರುವುದೂ ಅದೇ.. ಹೋಗ್ಲಿಬಿಡಿ.. ಆಗಸ್ಟ್ 4ಕ್ಕೆ ಹೊಸ ಹಾಡು ಕೇಳೋಕೆ ರೆಡಿಯಾಗಿ.