ಝುಂ ಝುಂ ಮಾಯಾ ಎನ್ನುತ್ತಾ ಬೆಳ್ಳಿತೆರೆಗೆ ಕಾಲಿಟ್ಟ ರಾಗಿಣಿ, ಈಗ ಭಯೋತ್ಪಾದಕಿಯಾಗಿದ್ದಾರೆ. ರಾಗಿಣಿ ಅಭಿನಯದ ಟೆರರಿಸ್ಟ್ ಸಿನಿಮಾ, ಈಗ ರಿಲೀಸ್ಗೆ ರೆಡಿ. ತಲೆ ತುಂಬಾ ಸ್ಕಾರ್ಫ್ ಸುತ್ತಿಕೊಂಡಿರುವ ರಾಗಿಣಿ ಪಾತ್ರದ ಹೆಸರು ರೇಷ್ಮಾ. ಮುಸ್ಲಿಂ ಕುಟುಂಬವೊಂದರ ಹಿರಿಯ ಮಗಳಾಗಿ ನಟಿಸಿದ್ದಾರೆ.
ಒಂದು ಬಾಂಬ್ ಬ್ಲಾಸ್ಟ್ ಹಾಗೂ ಅದರ ಸುತ್ತ ನಡೆಯುವ ಘಟನಾವಳಿಗಳೇ ಚಿತ್ರದ ಕಥಾವಸ್ತು.
ಚಿತ್ರದಲ್ಲಿ ರಾಗಿಣಿಗೆ ಮಾತುಗಳೇ ಕಡಿಮೆಯಂತೆ. ಪಿ.ಸಿ.ಶೇಖರ್ ನಿರ್ದೇಶನದ ಚಿತ್ರದ ಬಗ್ಗೆ ರಾಗಿಣಿ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲೊಂದು ಮೆಸೇಜ್ ಇದೆ. ಶಾಂತಿಯೇ ಪ್ರದಾನ ಎಂಬುದು ಚಿತ್ರದ ಕಥೆಯ ತಿರುಳು.