ಕುಮಾರಿ 21 F ಟ್ರೇಲರ್ ನೋಡಿದವರ ಗಮನ ಸೆಳೆಯೋದು ಹೀರೋಯಿನ್. ಸ್ಮೋಕ್ ಮಾಡುವ, ಡ್ರಿಂಕ್ಸ್ ಮಾಡುವ ಹುಡುಗಿ. ಅರೆ, ಚಿತ್ರದಲ್ಲಿ ಹೀರೋಯಿನ್ ಇಷ್ಟೊಂದು ಬೋಲ್ಡಾ.. ಎನ್ನಿಸಿದ್ರೆ ಅಚ್ಚರಿಯೇನೂ ಇಲ್ಲ. ಆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರೋದು ನಿಧಿ ಕುಶಾಲಪ್ಪ. ಕೊಡಗಿನ ಚೆಲುವೆ.
ನೀವು ಟ್ರೇಲರ್‍ನಲ್ಲಿ ಏನು ನೋಡಿದ್ದೀರೋ.. ಆ ಬೋಲ್ಡ್‍ನೆಸ್ ಇಡೀ ಚಿತ್ರದಲ್ಲಿರೋದು ಅಷ್ಟೆ. ಉಳಿದಂತೆ ಅದು ಸ್ಟೋರಿ ಓರಿಯಂಟೆಡ್ ಸಿನಿಮಾ. ಇಡೀ ಸಿನಿಮಾ ಬೋಲ್ಡ್ ಅಲ್ಲ ಎನ್ನುತ್ತಾರೆ ನಿಧಿ ಕುಶಾಲಪ್ಪ.
ಸುಮ್ಮನೆ ಜಡ್ಜ್‍ಮೆಂಟ್ ಕೊಡಬೇಡಿ. ಸಿನಿಮಾ ನೋಡಿ. ಖಂಡಿತಾ.. ಹೊರಗೆ ಬರುವಾಗ ನಿಮ್ಮ ಅಭಿಪ್ರಾಯ ಬೇರೆಯೇ ಆಗಿರುತ್ತೆ. ಅಷ್ಟೇ ಅಲ್ಲ, ಸಿನಿಮಾ ಮತ್ತು ಚಿತ್ರತಂಡದ ಬಗ್ಗೆ ಮೆಚ್ಚುಗೆ ಇಟ್ಟುಕೊಂಡು ಹೊರಬರುತ್ತೀರಿ ಎಂದು ವಿಶ್ವಾಸದಿಂದ ಹೇಳ್ತಾರೆ ನಿಧಿ.
ಕನ್ನಡಕ್ಕೆ ಇದು ಒಂದು ಡಿಫರೆಂಟ್ ಪ್ರಯತ್ನ. ನನಗೆ ಮೊದಲ ಚಿತ್ರದಲ್ಲೇ ಚಾಲೆಂಜಿಂಗ್ ರೋಲ್ ಸಿಕ್ಕಿದೆ. ಚಿತ್ರ ಒಳ್ಳೆಯ ಬ್ರೇಕ್ ಕೊಡುವ ನಿರೀಕ್ಷೆ ಇದೆ ಎಂದಿದ್ದಾರೆ ನಿಧಿ.ಪ್ರಣಮ್ ದೇವರಾಜ್ ಅಭಿಯನದ ಮೊದಲ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರೋದು ಶ್ರೀಮಾನ್ ವೇಮುಲ.