` ಫಾರಿನ್ ಕನ್ನಡಿಗರ ಮನಗೆದ್ದ ಕಥೆಯೊಂದು ಶುರುವಾಗಿದೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
katheyondhu shuruvagidhe gets good response
Katheyodhu Shuruvagidhe Image

ಕಥೆಯೊಂದು ಶುರುವಾಗಿದೆ. ದಿಗಂತ್ ಅಭಿನಯದ ಸಿನಿಮಾ. ಪೂಜಾ ದೇವರಿಯಾ ನಾಯಕಿ. ಸನ್ನಾ ಹೆಗ್ಡೆ ನಿರ್ದೇಶನದ ಮೊದಲ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಪಕರು. ಆಗಸ್ಟ್ 3ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾವನ್ನು ವಿದೇಶಗಳಲ್ಲಿ ಪ್ರೀಮಿಯರ್ ಶೋ ಮೂಲಕ ಪ್ರದರ್ಶನ ಮಾಡಿದೆ ಚಿತ್ರತಂಡ. 

ವಿದೇಶದಲ್ಲಿರುವ ಕನ್ನಡಿಗರು ಈಗಾಗಲೇ ಚಿತ್ರ ನೋಡಿ ಮೆಚ್ಚಿಕೊಂಡಿರುವುದು ನಿರ್ಮಾಪಕರ ಖುಷಿಗೆ ಕಾರಣವಾಗಿದೆ. ಡಬಲ್ ಮೀನಿಂಗ್ ಇಲ್ಲ. ಬಿಲ್ಡಪ್ ಇಲ್ಲ. ಹೈ ಬೇಸ್ ಮ್ಯೂಸಿಕ್ ಇಲ್ಲ. ಸಿಂಪಲ್ ಕಥೆ, ಫ್ರೆಶ್ ಆದ ನಿರೂಪಣೆ. ಒಂದೊಳ್ಳೆ ಸಿನಿಮಾ ಅನ್ನೋದು ಹಲವು ಪ್ರೇಕ್ಷಕರ ಅಭಿಪ್ರಾಯ. 

ವಿದೇಶಿ ಪ್ರೇಕ್ಷಕರಿಗೆ ಇಷ್ಟವಾಗಿರೋದು ದಿಗಂತ್‍ರ ಫ್ರೆಶ್ ಲುಕ್. ಕನ್ನಡದಲ್ಲಿ ಇಂತಹ ಇನ್ನಷ್ಟು ಸಿನಿಮಾಗಳು ಬರಲಿ ಎಂದು ಹಾರೈಸಿದ್ದಾರೆ ಫಾರಿನ್ ಕನ್ನಡಿಗರು.