` ಸಿಂಪಲ್ ಸುನಿ, ಪುಷ್ಕರ್ ಜೊತೆ ದಿಗಂತ್ ಹೊಸ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
suni, diganth, pushkar team up for next film
Simple Suni, Diganth, Puneeth Rajkumar

ಕಥೆಯೊಂದು ಶುರುವಾಗಿದೆ... ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರ ರಿಲೀಸ್‍ಗೂ ಮುನ್ನವೇ, ಪುಷ್ಕರ್ ಮತ್ತು ದಿಗಂತ್ ಮಧ್ಯೆ ಹೊಸದೊಂದು ಕಥೆ ಶುರುವಾಗುತ್ತಿದೆ. ಈ ಹೊಸ ಕಥೆ ಶುರು ಮಾಡುತ್ತಿರುವುದು ಸಿಂಪಲ್ ಸುನಿ.

ಕಥೆಯೊಂದು ಶುರುವಾಗಿದೆ ಲವ್ ಸ್ಟೋರಿಯಾದರೆ, ಹೊಸ ಕಥೆ ರೊಮ್ಯಾಂಟಿಕ್ ಕಾಮಿಡಿ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡೋದ್ರಲ್ಲಿ ಸುನಿ ಎಕ್ಸ್‍ಪರ್ಟ್ ಆಗಿಬಿಟ್ಟಿದ್ದಾರೆ. ದಿಗಂತ್ ಕೂಡಾ ರೊಮ್ಯಾನ್ಸ್‍ಗೆ ಹೇಳಿ ಮಾಡಿಸಿದಂತಿದ್ದಾರೆ.

ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಪುಷ್ಕರ್ ಅವರ ಜೊತೆಗೆ ರಕ್ಷಿತ್ ಶೆಟ್ಟಿ ಕೂಡಾ ನಿರ್ಮಾಪಕರು. ಆದರೆ, ಈ ಹೊಸ ಚಿತ್ರಕ್ಕೆ ಪುಷ್ಕರ್ ಒಬ್ಬರೇ ನಿರ್ಮಾಪಕರು. ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್‍ನಲ್ಲಿ ಶೂಟಿಂಗ್ ಶುರುವಾಗಲಿದ್ದು, ಮಲೆನಾಡು ಭಾಗದಲ್ಲಿಯೇ ಬಹುತೇಕ ಚಿತ್ರೀಕರಣ ನಡೆಯಲಿದೆಯಂತೆ.