ಆರ್ಯ, ಆರ್ಯ2 (ಅಲ್ಲು ಅರ್ಜುನ್), 100% ಲವ್(ನಾಗಚೈತನ್ಯ), ನೇನೊಕ್ಕೊಡಿನೆ (ಮಹೇಶ್ ಬಾಬು), ನಾನ್ನಕು ಪ್ರೇಮತೋ.. (ಜ್ಯೂ.ಎನ್‍ಟಿಆರ್).. ಒಂದಕ್ಕಿಂತ ಒಂದು ವಿಭಿನ್ನ ಚಿತ್ರಗಳು. ಅದರಲ್ಲೂ ಕಾಲಕ್ಕೆ ತಕ್ಕಂತ ಹದಿಹರೆಯದ ಪ್ರೀತಿಯನ್ನು ಹೇಳೊದ್ರಲ್ಲಿ ಸುಕುಮಾರ್‍ರನ್ನು ಮೀರಿಸುವವವರೇ ಇಲ್ಲ. ಇತ್ತೀಚೆಗೆ ಟಾಲಿವುಡ್‍ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ರಂಗಸ್ಥಳಂ (ರಾಮ್ ಚರಣ್ ತೇಜ) ಚಿತ್ರದ ನಿರ್ದೇಶಕ, ಕಥೆಗಾರ ಕೂಡಾ ಅವರೇ..ಸುಕುಮಾರ್. ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು. ಕುಮಾರಿ 21 F ಚಿತ್ರದ ಕಥೆಗಾರರು ಕೂಡಾ ಅವರೇ.
ತೆಲುಗಿನಲ್ಲಿ ಸುಕುಮಾರ್ ಅವರೇ ಬರೆದು, ನಿರ್ಮಿಸಿದ ಚಿತ್ರ ಅದು.
ತೆಲುಗಿನಲ್ಲಿ ಬ್ಲಾಕ್‍ಬಸ್ಟರ್ ಎನಿಸಿದ ಚಿತ್ರದಲ್ಲಿ ಮಾಡರ್ನ್ ಡ್ರೆಸ್ ಹಾಕುವ ಹುಡುಗಿ, ಅವರ ಬಗ್ಗೆ ಯುವಕರು ಇಟ್ಟುಕೊಳ್ಳೋ ಕೆಟ್ಟ ಭಾವನೆ.. ಯಾವುದು ಸರಿ.. ಯಾವುದು ತಪ್ಪು ಎನ್ನುವುದನ್ನು ಒಂದು ಲವ್‍ಸ್ಟೋರಿ ಮೂಲಕ ಹೇಳಿ ಗೆದ್ದಿದ್ದರು ಸುಕುಮಾರ್. ಆ ಚಿತ್ರವನ್ನು ಕನ್ನಡದಲ್ಲಿ ಅವರ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಶ್ರೀಮಾನ್ ವೇಮುಲು ನಿರ್ದೇಶಿಸಿದ್ದಾರೆ.
ನಿರ್ದೇಶಕ ಶ್ರೀಮಾನ್‍ಗೆ ಇದು ಮೊದಲ ಚಿತ್ರ. ಹೀರೋ ಪ್ರಣಾಮ್ ದೇವರಾಜ್ ಹಾಗೂ ನಾಯಕಿ ನಿಧಿ ಕುಶಾಲಪ್ಪಗೂ ಇದು ಪ್ರಥಮ ಚುಂಬನ. ಇದೇ ವಾರ ರಿಲೀಸ್ ಆಗುತ್ತಿದೆ.