ವಾಸು.. ಪಕ್ಕಾ ಕಮರ್ಷಿಯಲ್. ಇದು ಅನೀಷ್ ತೇಜೇಶ್ವರ್ ನಿರ್ಮಾಣದ ಸಿನಿಮಾ. ಈ ಚಿತ್ರಕ್ಕೆ ಅನೀಶ್ ನಿರ್ಮಾಪಕರಷ್ಟೇ ಅಲ್ಲ, ನಾಯಕರೂ ಹೌದು. ಚಿತ್ರದಲ್ಲಿ ಅವರೊಂದು ಹಾಡನ್ನೂ ಹಾಡಿದ್ದಾರೆ. ಇವನೊಬ್ಬ ಪೊರಕಿ.. ಇವನೊಬ್ಬ ಕಂತ್ರಿ.. ವಾಸು ಬಂದ ದಾರಿಬಿಡಿ ಅನ್ನೋ ಹಾಡಿಗೆ ಧ್ವನಿಯಾಗಿದ್ದಾರೆ ಅನೀಶ್.
ಚಿತ್ರಕ್ಕೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್, ಈ ಹಾಡನ್ನು ಯಾರಿಂದ ಹಾಡಿಸಬೇಕು ಎಂದು ಚರ್ಚೆ ಮಾಡುತ್ತಿದ್ದರಂತೆ. ಸ್ವತಃ ನಿರ್ಮಾಪಕರಾಗಿದ್ದರೂ, ನಾನೊಂದ್ಸಲ ಟ್ರೈ ಮಾಡ್ಲ ಎಂದು ರಿಕ್ವೆಸ್ಟ್ ಮಾಡಿದ್ರಂತೆ ಅನೀಶ್. ಟ್ರೈ ಮಾಡೋಣ ಎಂದು ಸ್ಟುಡಿಯೋಗೆ ಕರೆಸಿ ಹಾಡಿಸಿಯೂ ಬಿಟ್ಟಿದ್ದಾರೆ ಅಜನೀಶ್. ಹಾಡು ಕೇಳಿದ ಮೇಲೆ ಇಷ್ಟವಾಗಿ ಅದನ್ನೇ ಉಳಿಸಿಕೊಂಡಿದ್ದಾರೆ.
ಅಮ್ಮ ಐ ಲವ್ ಯು ಚಿತ್ರದಲ್ಲಿ ಗಮನ ಸೆಳೆದಿದ್ದ ನಿಶ್ವಿಕಾ ನಾಯ್ಡು, ಚಿತ್ರದ ನಾಯಕಿ. ಇದೇ ಶುಕ್ರವಾರ ಕಮರ್ಷಿಯಲ್ಲಾಗೇ ಚಿತ್ರಮಂದಿರಕ್ಕೆ ಬರುತ್ತಿದ್ದಾನೆ ವಾಸು.