ಅಮರ್ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್‍ಗೆ ಅಪ್ಪನಾಗಿ ರಾಜ್ ದೀಪಕ್ ಶೆಟ್ಟಿ ನಟಿಸುತ್ತಿದ್ದಾರೆ. ಶ್ರೀಕಂಠ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಾಜ್ ದೀಪಕ್ ಶೆಟ್ಟಿ, ವಯಸ್ಸಿನಲ್ಲಿ ಹಿರಿಯನೇನೂ ಅಲ್ಲ. ಅಭಿಷೇಕ್‍ಗಿಂತ ಒಂದೈದು ವರ್ಷ ದೊಡ್ಡವರಿರಬಹುದು. ಆದರೂ, ಚಿಕ್ಕ ವಯಸ್ಸಿಗೇ ಅಪ್ಪನಾಗಿ ನಟಿಸುತ್ತಿದ್ದಾರೆ.
ಅಭಿನಯದಲ್ಲಿ ಹೊಸತನ ಬೇಕು. ಅಷ್ಟೆ ಎನ್ನುವ ರಾಜ್ ದೀಪಕ್ ಶೆಟ್ಟಿಗೆ ತಂದೆ ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಬೇಸರವೇನೂ ಇಲ್ಲ. ಅಮರ್ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ತಾನ್ಯಾಹೋಪ್ ನಾಯಕಿಯಾಗಿರುವ ಚಿತ್ರದಲ್ಲಿರೋದು ಬೈಕ್ ರೇಸ್‍ನ ಕಥೆ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ, ಅಂಬರೀಷ್ ಪುತ್ರನ ಸಿನಿಮಾ ಎಂಬ ಕಾರಣಕ್ಕೆ ಇಡೀ ಚಿತ್ರರಂಗ ಕುತೂಹಲದಿಂದ ಎದುರು ನೋಡುತ್ತಿದೆ.