` ಉಪ್ಪಿ-ರವಿಚಂದ್ರನ್ ಕಾಂಬಿನೇಷನ್ ಬಲುಪು ರೀಮೇಕ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra raivhsndran in balapu movie
Upendra, Ravichandran Image

ಉಪೇಂದ್ರ ಮತ್ತು ರವಿಚಂದ್ರನ್ ಒಟ್ಟಾಗಿ ನಟಿಸುತ್ತಿರುವ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸಲಿದ್ದಾರೆ ಎನ್ನುವ ಸುದ್ದಿಯ ಜೊತೆ ಜೊತೆಗೇ ಅದು ತೆಲುಗಿನ ಬಲುಪು ಚಿತ್ರದ ರೀಮೇಕ್ ಎಂಬ ಸುದ್ದಿ ಕೇಳಿ ಬರೋಕೆ ಶುರುವಾಗಿದೆ. ತೆಲುಗಿನಲ್ಲಿ ರವಿತೇಜ ಹಾಗೂ ಪ್ರಕಾಶ್ ರೈ ನಟಿಸಿದ್ದರು. ಪ್ರಕಾಶ್ ರೈ ಪಾತ್ರದಲ್ಲಿ ರವಿಚಂದ್ರನ್, ರವಿತೇಜ ರೋಲ್‍ನಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ ಎನ್ನಲಾಗಿದೆ. ಶಾನ್ವಿ ಶ್ರೀವಾಸ್ತವ್ ರವಿಚಂದ್ರನ್ ಮಗಳಾಗಿ ನಟಿಸಲಿದ್ದಾರೆ.

ಶಾನ್ವಿ ಶ್ರೀವಾಸ್ತವ್ ಅವರನ್ನು ಕನ್ನಡಕ್ಕೆ ಕರೆತಂದವರೇ ಓಂ ಪ್ರಕಾಶ್ ರಾವ್. ಚಂದ್ರಲೇಖ ಚಿತ್ರದ ಮೂಲಕ. ಈಗ ಮತ್ತೊಮ್ಮೆ ಓಂಪ್ರಕಾಶ್ ಜೊತೆಯಾಗಿದ್ದಾರೆ. ಪಾತ್ರ ಚಿಕ್ಕದಾದರೂ, ಅಭಿಯನಕ್ಕೆ ಸ್ಕೋಪ್ ಇದೆ. ಉಪೇಂದ್ರ ಮತ್ತು ರವಿಚಂದ್ರನ್ ಜೊತೆ ನಟಿಸೋ ಅವಕಾಶ ಬೇರೆ. ಹಾಗಾಗಿ ಒಪ್ಪಿಕೊಂಡೆ ಎಂದು ಹೇಳಿದ್ದಾರೆ ಶಾನ್ವಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery