` ಅದು ನಾನೇ ಅಂದಾಗ.. ಆ ನಿರ್ಮಾಪಕರೇ ನಂಬಲಿಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
the villain artist shares an interesting story
Madhu Guruswamy

ಇಂಥಾದ್ದೊಂದು ಮುಜುಗರ ಅನುಭವಿಸಿದ ನಟ ಮಧು ಗುರುಸ್ವಾಮಿ. ಯಾರು ಅಂದುಕೊಂಡ್ರಿ..? ಭಜರಂಗಿಯ ವೃದ್ಧ ಮಾಂತ್ರಿಕ, ವಜ್ರಕಾಯದಲ್ಲಿ ಶಿವರಾಜ್‍ಕುಮಾರ್‍ಗೆ ತಾತ, ಮಾರುತಿ 800ನಲ್ಲಿ ಶೃತಿ ಹರಿಹರನ್ ಅಜ್ಜ.. ನಟನೆಯೇನೋ ಅದ್ಭುತ. ಚಿತ್ರರಂಗಕ್ಕೆ ಬಂದು 10 ವರ್ಷಗಳಾಗುತ್ತಿವೆ. ಆದರೆ, ನಟಿಸಿರುವುದು ಒಂಭತ್ತೇ ಸಿನಿಮಾ. ಕಾರಣ, ಖಳನ ಪಾತ್ರಗಳಾದರೂ ಸೈ, ಒಂದು ಪಾತ್ರ ನನಗೆ ಭಯ ಹುಟ್ಟಿಸಬೇಕು, ಈ ಪಾತ್ರ ನಾನು ಮಾಡೋಕೆ ಸಾಧ್ಯವಾ ಎಂದು ನಮಗೇ ಅನ್ನಿಸಬೇಕು ಅಂತಾರೆ ಮಧು.

ಇಂತಹ ಮಧು ಈಗ ತೆಲುಗಿನ ಸಾಕ್ಷ್ಯಂ ಚಿತ್ರದಲ್ಲಿ ವಿಲನ್ ಆಗಿದ್ದಾರೆ. ಜಗಪತಿಬಾಬು, ಶರತ್ ಕುಮಾರ್ ಅಂತಹವರ ಜೊತೆ ನಟಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳೋ ಅವರು ಆ ಚಿತ್ರದಲ್ಲಿ ಅವಕಾಶ ಸಿಕ್ಕ ಕಥೆಯ ಸ್ವಾರಸ್ಯ ಹೇಳ್ತಾರೆ ಕೇಳಿ.

ಆ ಚಿತ್ರದ ನಿರ್ಮಾಪಕರು, ತೆಲುಗಿನವರೇ. ಟಿವಿಯಲ್ಲಿ ವಜ್ರಕಾಯ ಸಿನಿಮಾ ನೋಡುತ್ತಿದ್ದರಂತೆ. ಜಯಸುಧಾ ಇದ್ದ ಕಾರಣ ಚಿತ್ರ ನೋಡುತ್ತಿದ್ದ ಅವರಿಗೆ ನನ್ನ ಪಾತ್ರ ಇಷ್ಟವಾಗಿದೆ. ತಕ್ಷಣ ಸಂಪರ್ಕಿಸಿ ತಮ್ಮ ಚಿತ್ರದಲ್ಲಿ ನಟಿಸೋಕೆ ಚಾನ್ಸ್ ಕೊಟ್ಟರು. ಆದರೆ, ನಾನು ಅವರನ್ನು ಭೇಟಿ ಮಾಡಿದಾಗ, ನನ್ನನ್ನು ನಂಬಲೇ ಇಲ್ಲ. ಇಷ್ಟು ಚಿಕ್ಕ ಹುಡುಗ ಅಷ್ಟು ದೊಡ್ಡ ವಯಸ್ಸಿನ ಪಾತ್ರ ಮಾಡೋಕೆ ಹೇಗೆ ಸಾಧ್ಯ ಎಂದುಕೊಂಡರು. ಕೊನೆಗೆ ಅವರನ್ನು ನಂಬಿಸೋಕೆ ಅವರ ಎದುರು ಅಡಿಷನ್ ಮಾಡಬೇಕಾಯ್ತು. ನಾನೇ ಎಂದು ಕನ್‍ಫರ್ಮ್ ಮಾಡಿಕೊಂಡ ಮೇಲೆ ಅವಕಾಶ ಕೊಟ್ಟರು ಎಂದು ಹೇಳಿಕೊಂಡಿದ್ದಾರೆ ಮಧು ಗುರುಸ್ವಾಮಿ.

ವಯಸ್ಸು 30 ದಾಟುವ ಮುನ್ನವೇ ಶಿವರಾಜ್‍ಕುಮಾರ್ ಅಂತಹವರಿಗೆ ಅಜ್ಜನಾಗಿ ನಟಿಸಿದ್ದೇನೆ. ಅದು ನನಗೆ ಸಿಕ್ಕ ದೊಡ್ಡ ಉಡುಗೊರೆ. ವಿಭಿನ್ನ ಪಾತ್ರಗಳನ್ನು ಮಾಡುವುದು ನನ್ನ ಆದ್ಯತೆ ಎಂದು ಹೇಳಿಕೊಳ್ತಾರೆ ಮಧು.

Ayushmanbhava Movie Gallery

Ellidhe Illitanaka Movie Gallery