ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಶ್ರೇಯಾ ಅಂಚನ್ ಎಂಬ ಚೆಲುವೆ ರಿಸೆಪ್ಷನಿಸ್ಟ್ ಆಗಿದ್ದಾರೆ. ದಿಗಂತ್ ಮಾಲೀಕತ್ವದ ರೆಸಾರ್ಟ್‍ಗೆ ಅವರೇ ರಿಸೆಪ್ಷನಿಸ್ಟ್. ನೋಡೋಕೆ ಬ್ಯೂಟಿಫುಲ್ ಹುಡುಗಿ. ಹುಡುಗರು ಬೀಳದೇ ಇರ್ತಾರಾ..? ಹಾಗೆ ಬೆನ್ನು ಬಿದ್ದ ಹುಡುಗನಿಗೆ ಈ ಶ್ರೇಯಾ ಅಂಚನ್ ಏನ್ ಹೇಳ್ತಾರೆ..? ಅವರನ್ನ ಹೇಗೆ ಮ್ಯಾನೇಜ್ ಮಾಡ್ತಾರೆ..? ತಿಳಿದುಕೊಳ್ಳೋ ಕುತೂಹಲ ಇದ್ಯಾ..? ಕಥೆಯೊಂದು ಶುರುವಾಗಿದೆ ಸಿನಿಮಾ ನೋಡಿ.
ಶ್ರೇಯಾ ಅಂಚನ್ ಯಾರು ಗೊತ್ತಲ್ಲ, ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿನಟಿಸಿದ್ದ ಚೆಲುವೆ. ಕಥೆಯೊಂದು ಶುರುವಾಗಿದೆ ನನ್ನ ವೃತ್ತಿ ಬದುಕಿನಲ್ಲಿ ವಿಶೇಷ ಚಿತ್ರ. ನಿರ್ದೇಶಕ ಸೆನ್ನಾ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದುದ್ದಕ್ಕೂ ನನಗೆ ನೀಡಿದ ಸಪೋರ್ಟ್‍ನ್ನು ಮರೆಯೋಕೆ ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ ಶ್ರೇಯಾ. ಚಿತ್ರದಲ್ಲಿ ಶ್ರೇಯಾ ಅವರ ಪಾತ್ರದ ಹೆಸರು ಸ್ವರ್ಣ.