ಕಿಚ್ಚ ಸುದೀಪ್ ಪೈಲ್ವಾನ್ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ದುನಿಯಾ ವಿಜಯ್ ಕುಸ್ತಿ ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಕಥೆಗಳು ಬೇರೆಯಾದರೂ, ಇಬ್ಬರೂ ಚಿತ್ರದಲ್ಲಿ ಪೈಲ್ವಾನರೇ. ಈಗ ದರ್ಶನ್ ಕೂಡಾ ಪೈಲ್ವಾನನ ಕಥೆ ಆಧರಿಸಿದ ಸಿನಿಮಾ ಮಾಡುತ್ತಿದ್ದಾರಾ..? ಸದ್ಯಕ್ಕೆ ಇದು ಕುತೂಹಲಕ್ಕೆ ಮಾತ್ರ ಸೀಮಿತ.
ದರ್ಶನ್, ಡಿ.ಉಮಾಪತಿ, ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ 53ನೇ ಸಿನಿಮಾ ಸೆಟ್ಟೇರುತ್ತಿದೆ. ಆ ಚಿತ್ರಕ್ಕೆ ರಾಬರ್ಟ್ (ಚೌಕ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರು), ವಜ್ರಮುನಿ, ಕಾಟೇರ ಹೆಸರುಗಳು ಲಿಸ್ಟಿನಲ್ಲಿವೆ. ಯಾವುದೂ ಫೈನಲ್ ಆಗಿಲ್ಲ.
ಪಟ್ಟಿಯಲ್ಲಿ ಕಾಟೇರ ಅನ್ನೋ ಹೆಸರು ಇರೋದೇ ದರ್ಶನ್ ಪೈಲ್ವಾನ್ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಅನುಮಾನ ಮೂಡೋಕೆ ಕಾರಣ. ಕಾಟೇರ ಅನ್ನೋದು ದಾವಣಗೆರೆ ಸಮೀಪದಲ್ಲಿದ್ದ ಪೈಲ್ವಾನ್‍ನ ಹೆಸರು.
ಅದೂ ಅಂತಿಂತಾ ಪೈಲ್ವಾನ್ ಅಲ್ಲ, ಒಂದ್ಸಲ ಊಟಕ್ಕೆ ಕುಂತ್ರೆ 35 ಚಪಾಯಿ, 20 ರೊಟ್ಟಿ, ಎರಡುಮೂರು ಕೋಳಿ, 15 ಕಲ್ಲಂಗಡಿ ಜ್ಯೂಸ್ ಕುಡಿಯೋ ಜಟ್ಟಿಯಂತೆ. ಹಾಗಾದರೆ, ಇದು ಕೂಡಾ ಜಟ್ಟಿಯ ಕಥೆ ಆಧರಿಸಿದ ಸಿನಿಮಾನಾ..?
ಸದ್ಯಕ್ಕೆ ಎಲ್ಲವೂ ಸೀಕ್ರೆಟ್. ಒಂದು ನಿರ್ದಿಷ್ಟ ಹಂತಕ್ಕೆ ಬರುವವರೆಗೆ ಯಾವುದೂ ಅಧಿಕೃತವಲ್ಲ