ರಜನಿಕಾಂತ್ ಸೂಪರ್ ಸ್ಟಾರ್ ಆದ್ರೆ, ದರ್ಶನ್ ಚಾಲೆಂಜಿಂಗ್ ಸ್ಟಾರ್. ನಟ ಶಂಕರ್ ಅಶ್ವತ್ಥ್‍ಗೆ ದರ್ಶನ್ ಸರಳತೆ ಕಂಡಾಗ, ತಕ್ಷಣ ರಜನಿಕಾಂತ್ ನೆನಪಾಗಿದ್ದಾರೆ. ಅವಕಾಶಗಳಿಲ್ಲದೆ ಟ್ಯಾಕ್ಸಿ ಓಡಿಸುತ್ತಿದ್ದ ನಟ ಶಂಕರ್ ಅಶ್ವತ್ಥ್ ಅವರ ವಿಷಯ ತಿಳುದು, ದರ್ಶನ್ ತಮ್ಮ ಯಜಮಾನ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಶೂಟಿಂಗ್‍ಗೆಂದು ಸೆಟ್ಟಿಗೆ ಹೋದಾಗ, ದರ್ಶನ್ ಸ್ವತಃ ಎದ್ದು ಬಂದು, ಶಂಕರ್ ಅವರ ಯೋಗಕ್ಷೇಮ ವಿಚಾರಿಸಿಕೊಂಡರಂತೆ.
ಅವರಿಗೆ ಆಗ ತಕ್ಷಣ ನೆನಪಾಗಿದ್ದು ರಜನಿಕಾಂತ್. ಹಿಂದೊಮ್ಮೆ ರಜನಿಕಾಂತ್ ಅವರನ್ನು ನೋಡೋಕೆ ಹೋಗಿದ್ದಾಗ, ನನ್ನ ತಂದೆಯ ಹೆಸರು ಹೇಳಿದ್ದೆ. ಅಶ್ವತ್ಥ್ ಅವರ ಮಗ ಎಂದು ಗೊತ್ತಾದ ತಕ್ಷಣ ರಜಿನಿಕಾಂತ್, ನಾನು ಇದ್ದಲ್ಲಿಗೇ ಬಂದು ಮಾತನಾಡಿಸಿದ್ದರು. ನನ್ನ ತಂದೆಯೇನೋ ಹಿರಿಯ ಕಲಾವಿದ. ಆದರೆ, ನಾನೆಲ್ಲಿ..? ನನ್ನಂತಹವನನ್ನು ತಾನೊಬ್ಬ ಸ್ಟಾರ್ ಎಂಬ ಬಿಗುಮಾನವಿಲ್ಲದೆ ನಡೆಸಿಕೊಂಡಿದ್ದು ಒಳ್ಳೆಯ ಸಂಸ್ಕಾರ. ಆ ಪರಮಾತ್ಮ, ಅವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್.