` ನಾಗರಹಾವು ನೋಡಿದ ಶಿವಣ್ಣ, ಜಗ್ಗೇಶ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
nagarahaavu is superhit across karnataka
Nagarahaavu Image

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ನಾಗರಹಾವು, ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸುತ್ತಿದೆ. ಹೊಸ ಸಿನಿಮಾಗೆ ಬರುವಂತೆ ಪ್ರೇಕ್ಷಕರು ಥಿಯೇಟರ್‍ಗೆ ಓಡೋಡಿ ಬರುತ್ತಿರುವುದು ಕ್ಲಾಸಿಕ್ ಸಿನಿಮಾ ಪವರ್‍ಗೆ ಸಾಕ್ಷಿಯಾಗುತ್ತಿದೆ. ಈ ಸಿನಿಮಾವನ್ನು ಥಿಯೇಟರ್‍ನಲ್ಲೇ ನೋಡೋದಾಗಿ ಚಿತ್ರೋದ್ಯಮದ ಹಲವರು ಹೇಳಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಇತ್ತೀಚೆಗೆ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಚಿತ್ರ ನೋಡಿದ್ದಾರೆ. ಜಗ್ಗೇಶ್ ಕೂಡಾ, ಸಿನಿಮಾ ನೋಡಿ, ಹೊಸ ತಂತ್ರಜ್ಞಾನದಲ್ಲಿ ಹೊಸ ನಾಗರಹಾವು ಅದ್ಭುತವಾಗಿದೆ ಎಂದಿದ್ದಾರೆ.

ಶಿವರಾಜ್‍ಕುಮಾರ್ ಜೊತೆ ರವಿಚಂದ್ರನ್ ಸೋದರ ಬಾಲಾಜಿ ಕೂಡಾ ಸಿನಿಮಾ ನೋಡಿದರು. ಈಶ್ವರಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವರಾಜ್‍ಕುಮಾರ್, ಇದೇ ವೇಳೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಬಗ್ಗೆಯೂ ಮಾತನಾಡಿದ್ದಾರೆ.

ವಿಷ್ಣುವರ್ಧನ್ ಸ್ಮಾರಕ ಆಗಬೇಕು. ಆಗುತ್ತೆ. ಈ ಕುರಿತು ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ ಎಂದಿದ್ದಾರೆ.

ಇದೆಲ್ಲದರ ಮಧ್ಯೆ ಸಿನಿಮಾವನ್ನು ಹೊರರಾಜ್ಯಗಳಲ್ಲೂ ರಿಲೀಸ್ ಮಾಡೋಕೆ ವಿತರಕರು ಮುಂದಾಗಿದ್ದಾರೆ. ಕೆಲವೇ ದಿನಗಳಲ್ಲಿ ಅಲಹಾಬಾದ್, ಹೈದರಾಬಾದ್‍ಗಳಲ್ಲೂ ನಾಗರಹಾವು ಭುಸುಗುಟ್ಟಲಿದೆ.