ಶಿವರಾಜ್ ಕುಮಾರ್ ನಟಿಸುತ್ತಿರುವ, ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಚಿತ್ರ ರುಸ್ತುಂ. ಶಿವಣ್ಣಂಗೆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಜೋಡಿ. ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟ ವಿವೇಕ್ ಒಬೇರಾಯ್ ಕೂಡಾ ನಟಿಸುತ್ತಿದ್ದಾರೆ. ಆ ವಿವೇಕ್ ಒಬೇರಾಯ್‍ಗೆ ಜೋಡಿಯಾಗ್ತಿರೋದು ರಚಿತಾ ರಾಮ್.
ಬುಲ್ ಬುಲ್ ರಚಿತಾ ರಾಮ್ ಕೈತುಂಬಾ ಸಿನಿಮಾಗಳಿವೆ. ಅಯೋಗ್ಯ ಶೂಟಿಂಗ್ ಮುಗಿಸಿಕೊಂಡು ರಿಲೀಸ್‍ಗೆ ರೆಡಿಯಾಗಿದ್ದರೆ, ರಾಜಕುಮಾರ, ಸೀತಾರಾಮ ಕಲ್ಯಾಣ, ಐ ಲವ್ ಯೂ ಚಿತ್ರೀಕರಣದಲ್ಲಿವೆ. ಹೀಗಿರುವಾಗಲೇ ರುಸ್ತುಂ ಒಪ್ಪಿಕೊಂಡಿದ್ದಾರೆ ರಚಿತಾ.
ಚಿತ್ರದಲ್ಲಿ ನನ್ನ ಪಾತ್ರ ತುಂಬಾನೇ ಸ್ಪೆಷಲ್. ಇಡೀ ಸಿನಿಮಾಗೆ ತಿರುವು ಕೊಡುವ ಪಾತ್ರ ನನ್ನದು. ಹೀಗಾಗಿ ಸಿನಿಮಾ ಒಪ್ಪಿಕೊಂಡೆ ಎಂದಿದ್ದಾರೆ ರಚಿತಾ ರಾಮ್.