ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಅದ್ದೂರಿ ಚಿತ್ರ ದಿ ವಿಲನ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹೆಚ್ಚೂ ಕಡಿಮೆ ಒಂದೂವರೆ ವರ್ಷ ಶೂಟಿಂಗ್ ನಡೆಸಲಾಗಿದೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದನ್ನು ಪ್ರೇಮ್ ಖುಷಿಯಿಂದ ಹೇಳಿಕೊಂಡಿದ್ದಾರೆ.
ಚಿತ್ರಕ್ಕಾಗಿ 118 ದಿನಗಳ ಶೂಟಿಂಗ್ ಮಾಡಿದ್ದಾರೆ. ಅರಮನೆ ಮೈದಾನದಲ್ಲಿ ಕೊನೆಯ ದಿನದ ಶೂಟಿಂಗ್ ಮುಗಿಸಿದ ಪ್ರೇಮ್, ಶಿವಣ್ಣ ಡಾರ್ಲಿಂಗ್, ಸುದೀಪ್ ಹಾಗೂ ಆ್ಯಮಿ ಜಾಕ್ಸನ್‍ಗೆ ಧನ್ಯವಾದ ಹೇಳಿದ್ದಾರೆ. ಪ್ರೇಮ್ ಅವರನ್ನು ಫ್ಯಾಷನೇಟ್ ಡೈರೆಕ್ಟರ್ ಎಂದು ಹೊಗಳಿರುವ ಸುದೀಪ್, ಇಂಥಾದ್ದೊಂದು ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.
ಸಿನಿಮಾದ ಆಡಿಯೋ ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಸಿನಿಮಾ ಅಕ್ಟೋಬರ್‍ನಲ್ಲಿ ಬರಬಹುದು.