ನಾಗರಹಾವು. ವಿಷ್ಣುವರ್ಧನ್, ಅಂಬರೀಷ್ ಅಭಿನಯದ ಮೊದಲ ಸಿನಿಮಾ. ಪುಟ್ಟಣ್ಣ ನಿರ್ದೇಶನದ ಕ್ಲಾಸಿಕ್ ಚಿತ್ರ. 45 ವರ್ಷಗಳ ನಂತರ ರವಿಚಂದ್ರನ್, ಬಾಲಾಜಿಯವರಿಂದ ರೀ ರಿಲೀಸ್ ಆದ ನಾಗರಹಾವು, 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಂಡಿದೆ. ವಿತರಣೆ ಮಾಡಿದ್ದ ಕಾರ್ತಿಕ್ ಗೌಡ ಖುಷಿಯಾಗಿದ್ದಾರೆ.
ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ..? ಹೆಚ್ಚೂ ಕಡಿಮೆ ಒಂದು ಕೋಟಿ. ಸ್ಟಾರ್‍ಗಳೂ ಕೂಡಾ ಸಿನಿಮಾ ನೋಡುವ ಅಭಿಲಾಷೆ ವ್ಯಕ್ತಪಡಿಸಿದ್ದು, ಚಿತ್ರಮಂದಿರಕ್ಕೆ ಸ್ವತಃ ಹೋಗಿ ಸಿನಿಮಾ ನೋಡೋಕೆ ರೆಡಿಯಾಗಿದ್ದಾರೆ.
ಇದು ವಿಷ್ಣುವರ್ಧನ್, ಅಂಬರೀಷ್‍ರ ಮೊದಲ ಸಿನಿಮಾ. 45 ವರ್ಷ ಹಳೆಯ ಸಿನಿಮಾ. ವಿಷ್ಣುವರ್ಧನ್ ಈಗ ಕನ್ನಡಿಗರ ಜೊತೆಯಲ್ಲಿಲ್ಲ. ಆದರೆ, ಅವರ ಸಿನಿಮಾ ಸೃಷ್ಟಿಸುತ್ತಿರುವ ದಾಖಲೆ ನೋಡಿದರೆ, ಗೆದ್ದಿದ್ದು ವಿಷ್ಣು. ಗೆಲ್ಲಿಸಿದ್ದು ವಿಷ್ಣು ಫ್ಯಾನ್ಸ್ ಅನ್ನೋದು ಸತ್ಯ. ಅಭಿಮಾನಿಗಳೇ ದೇವರು ಅನ್ನೋದು ಸುಮ್ಮನೆ ಅಲ್ಲ.