ಶಕೀಲಾ... ಒಂದಾನೊಂದು ಕಾಲದ ಪಡ್ಡೆ ಹುಡುಗರ ಸ್ವಪ್ನ ಸುಂದರಿ. ಈಗ ಅವರ ಜೀವನವೇ ಸಿನಿಮಾ ಆಗುತ್ತಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಬಾಲಿವುಡ್ ಸುಂದರಿ ರಿಚಾ ಚಡ್ಡಾ, ಶಕೀಲಾ ಪಾತ್ರ ಮಾಡುತ್ತಿದ್ದಾರೆ. ರಿಚಾ ಸ್ಲಿಂ & ಬ್ಯೂಟಿಫುಲ್. ಆದರೆ, ಶಕೀಲಾ ಪಾತ್ರಕ್ಕಾಗಿ ಡುಮ್ಮಗಾಗುತ್ತಿಲ್ಲ. ಚಿತ್ರದಲ್ಲಿ ಆ ಅಂಶಗಳಿಗಿಂತ ಹೆಚ್ಚು, ಶಕೀಲಾ ಅವರ ವೈಯಕ್ತಿಕ ಜೀವನಕ್ಕೆ ಒತ್ತು ಕೊಡಲಾಗಿದೆ ಎಂದಿದ್ದಾರೆ ಎಂದಿದ್ದಾರೆ ರಿಚಾ ಚಡ್ಡಾ.
ಇಷ್ಟು ವರ್ಷಗಳ ವೃತ್ತಿ ಜೀವನ, ವೈಯಕ್ತಿಕ ಬದುಕಿನ ಏರಿಳಿತಗಳನ್ನು ಕಂಡಿರುವ ಶಕೀಲಾ, ಈಗ ಸಿಂಗಲ್. ನಿಮಗೆ ಜೀವನ ಕಲಿಸಿದ ದೊಡ್ಡ ಪಾಠವೇನು ಎಂದರೆ ಶಕೀಲಾ ಹೇಳುವುದಿಷ್ಟೆ.. ಯಾರನ್ನೂ ನಂಬಬಾರದು.. ಹೆತ್ತವರನ್ನು, ಬಂಧುಗಳನ್ನು ಯಾರನ್ನೂ ನಂಬಬಾರದು.
ಹೌದು, ಶಕೀಲಾರ ಬದುಕನ್ನು ಪಾಪದ ಕೂಪಕ್ಕೆ ತಳ್ಳಿದ್ದು ಅವರ ತಾಯಿ. ವೇಶ್ಯಾವಾಟಿಕೆಗೆ ದೂಡಿದ್ದರು ಎಂಬುದನ್ನು ಶಕೀಲಾ ತಮ್ಮ ಆತ್ಮಕಥನದಲ್ಲಿ ಬರೆದುಕಂಡಿದ್ದಾರೆ. ಮಗಳು ವಯಸ್ಕರ ಚಿತ್ರಗಳಲ್ಲಿ ನಟಿಸುತ್ತಿರುವಾಗ, ಹಣ ಬರುತ್ತದೆ ಎಂಬ ಕಾರಣಕ್ಕೆ ಪ್ರೋತ್ಸಾಹಿಸಿದವರು ಅವರ ತಾಯಿ. ಇನ್ನು ಶಕೀಲ ಅವರು ದುಡಿದಿದ್ದ ಹಣವನ್ನು ದೋಚಿಕೊಂಡು ಅವರನ್ನು ಬೀದಿಗೆ ತಳ್ಳಿದವರು ಅವರ ಒಡಹುಟ್ಟಿದವರು. ಈ ಕಥೆಗಳೆಲ್ಲ ಸಿನಿಮಾದಲ್ಲಿ ಬರಲಿವೆ.