ಭಾವನಾ ರಾವ್. ಗಾಳಿಪಟದ ತರಲೆ ಹುಡುಗಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಅಪ್ಪಟ ಕನ್ನಡತಿ. ಈ ಕನ್ನಡತಿಯ ಚೆಲುವನ್ನು ಈಗ ಬೆಲ್ಜಿಯಂನ ಫೋಟೋಗ್ರಾಫರ್ ಒಬ್ಬರು ಸೆರೆ ಹಿಡಿದಿದ್ದಾರೆ.ಜಾಹೀರಾತೊಂದರ ಚಿತ್ರೀಕರಣಕ್ಕೆ ಗೋವಾಕ್ಕೆ ಹೋಗಿದ್ದ ಭಾವನಾ ರಾವ್ ಅವರನ್ನು ನೋಡಿದ ಫ್ರಾನ್ಸ್‍ನ ಫೋಟೋಗ್ರಾಫರ್ ಫ್ರಾನ್ಸ್‍ಕೋ ಮ್ಯಾಥಿಸ್ ಎಂಬುವರು ಫೋಟೋಶೂಟ್ ಮಾಡೋಕೆ ಮುಂದೆ ಬಂದಿದ್ದಾರೆ.
ನಾನು ಇದುವರೆಗೆ ಇಂಡಿಯನ್ಸ್ ಫೋಟೋಶೂಟ್ ಮಾಡಿಲ್ಲ. ನೀವು ಯೆಸ್ ಅಂದ್ರೆ, ನಿಮ್ಮ ಫೋಟೋಶೂಟ್ ಮಾಡುತ್ತೆನೆ ಎಂದಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ಫೋಟೋಗ್ರಾಫರ್ ಕೇಳುವಾಗ ಬೇಡ ಎನ್ನುವರುಂಟೇ. ಭಾವನಾರಾವ್ ಓಕೆ ಎಂದಿದ್ದಾರೆ. ಫೋಟೋ ನೋಡಿ, ನಾನು ಇಷ್ಟು ಗ್ಲಾಮರಸ್ ಆಗಿ ಕಾಣ್ತೀನಾ ಎಂದು ಸ್ವತಃ ಅಚ್ಚರಿಗೊಂಡರಂತೆ ಭಾವನಾ ರಾವ್.
ಅಂದಹಾಗೆ ಭಾವನಾ ರಾವ್ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ. ಗಾಂಧಿಗಿರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಕಥೆ ಇಷ್ಟವಾದರೆ ಮಾತ್ರ ಸಿನಿಮಾ ಮಾಡುತ್ತೇನೆ ಎನ್ನುವ ಮೂಲಕ ಚ್ಯೂಸಿಯಾಗಿದ್ದಾರೆ.