ಒಂದು ಕಡೆ ದಿ ವಿಲನ್ ಚಿತ್ರದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್‍ನಲ್ಲಿ ಬ್ಯುಸಿಯಾಗಿರುವ ಜೋಗಿ ಪ್ರೇಮ್ ಗಾಂಧಿಗಿರಿ ಚಿತ್ರದಲ್ಲಿ ಹೀರೋ ಆಗಿದ್ದಾರೆ. ವಿಲನ್ ಮುಗಿಯುವವರೆಗೆ ಆ ಚಿತ್ರ ಶುರುವಾಗೋದು ಡೌಟು. ಆ ಚಿತ್ರದಲ್ಲಿ ಹೀರೋಯಿನ್ ಭಾವನಾ ರಾವ್. ಅಪ್ಪಟ ಬಜಾರಿ ಪಾತ್ರವಂತೆ. ಮುಗ್ದತೆ, ಬಜಾರಿತನ ಎರಡೂ ಇರುವ ಆ ಪಾತ್ರದಲ್ಲಿ ನಟಿಸೋದು ನನಗೆ ನಿಜಕ್ಕೂ ಸವಾಲು. ಏಕೆಂದರೆ, ನಾವೆಲ್ಲ ಹುಟ್ಟಿ ಬೆಳೆದಿರೋದು ನಗರಗಳಲ್ಲಿ. ಹೀಗಾಗಿ ಪಾತ್ರಕ್ಕೆ ತಯಾರಿ ನಡೆಸಿದ್ದೇನೆ ಎಂದಿದ್ದಾರೆ ಭಾವನಾ ರಾವ್.
ಬಜಾರಿ ಪಾತ್ರದ ತಯಾರಿಗೆ ಭಾವನಾ ರಾವ್ ನೊಡಿದ್ದು ಮಂಜುಳಾ ಅವರ ಹಳೆಯ ಸಿನಿಮಾಗಳನ್ನ. ಹಳ್ಳಿಯ ಮುಗ್ದೆ ಹಾಗೂ ಬಜಾರಿ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದ ಮಂಜುಳಾ ಅವರ ಪಾತ್ರಗಳನ್ನು ನೋಡಿ ಫಿದಾ ಆಗಿಬಿಟ್ಟೆ. ಜೊತೆಗೆ ಹಳ್ಳಿ ಹುಡುಗಿಯರ ಜೊತೆ ಬೆರೆತು ಪಾತ್ರಕ್ಕೆ ತಯಾರಾಗುತ್ತಿದ್ದೇನೆ ಎಂದಿದ್ದಾರೆ ಭಾವನಾ ರಾವ್.