ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಚಿತ್ರದ ಹೀರೋ ಧನ್‍ವೀರ್. ಅವರಿಗಿದು ಹೊಸ ಸಿನಿಮಾ. ಪಾರಿವಾಳದ ರೇಸ್, ರೌಡಿಸಂ, ಲವ್‍ಸ್ಟೋರಿ, ಮರ್ಡರ್ ಮಿಸ್ಟರಿ ಎಲ್ಲವೂ ಇರುವ ಸಿನಿಮಾ ಇದು. ಚಿತ್ರದ ಡೈರೆಕ್ಟರ್ ಸುನಿ. ಸಿಂಪಲ್ ಸುನಿ. ಲಾಂಚಿಂಗ್ ಸುನಿ. ಈ ಚಿತ್ರದೊಂದಿಗೆ ಸಿಂಪಲ್ ಸುನಿಗೆ ಇಂಥಾದ್ದೊಂದು ಬಿರುದು ಸಿಕ್ಕರೂ ಆಶ್ಚರ್ಯವಿಲ್ಲ.
ರಕ್ಷಿತ್ ಶೆಟ್ಟಿ ಎಂಬ ನಟ ಕನ್ನಡಿಗರಿಗೆ ಚಿರಪರಿಚಿತನಾಗಿದ್ದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ. ಆಪರೇಷನ್ ಆಲಮೇಲಮ್ಮ ಮೂಲಕ ರಿಷಿ, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಮೂಲಕ ಪ್ರವೀಣ್, ಈಗ ಬಜಾರ್ ಚಿತ್ರದ ಮೂಲಕ ಧನ್‍ವೀರ್.
ವಿಶೇಷ ಅಂದ್ರೆ, ನಾನು ಹೊಸಬರನ್ನೇನೂ ಪರಿಚಯಿಸಲಿಲ್ಲ. ಅದಕ್ಕೂ ಮೊದಲೇ ನಟಿಸಿದ್ದ ಅವರಿಗೆ ನನ್ನ ಚಿತ್ರಗಳ ಮೂಲಕ ಹೆಸರೂ ಸಿಕ್ಕಿತು. ಹೀಗಾಗಿ ನಾನು ಲಾಂಚಿಂಗ್ ಡೈರೆಕ್ಟರ್ ಎನಿಸಿಕೊಂಡಿದ್ದೇನೆ ಅಂತಾರೆ ಸುನಿ. ಬಜಾರ್ ಚಿತ್ರದಲ್ಲಿ ಧನ್‍ವೀರ್ ಹಾಗೂ ಕಿರುತೆರೆ ಕಲಾವಿದೆ ಆದಿತಿಯನ್ನು ಲಾಂಚ್ ಮಾಡಿದ್ದಾರೆ ಸಿಂಪಲ್ ಸುನಿ.