ಕುಮಾರಿ 21F ಮೆಚ್ಯೂರಿಟಿಯ ಕಥೆ. ದೊಡ್ಡ ಕನಸು ಕಾಣುತ್ತಿರುವ ಒಬ್ಬ ಹುಡುಗ, ಮಾಡೆಲಿಂಗ್ ಲೋಕದ ಬೋಲ್ಡ್ ಹುಡುಗಿ ನಡುವೆ ನಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್ ಕುಮಾರಿ 21 F . ಮೂಲತಃ ಇದು ತೆಲುಗು ಸಿನಿಮಾ. ಕನ್ನಡಕ್ಕೆ ಇದನ್ನು ರೀಮೇಕ್ ಮಾಡಲಾಗಿದೆ. ಈಗಿನ ಯುವ ಮನಸ್ಸುಗಳ ಹೊಯ್ದಾಟಗಳು, ಹರೆಯದ ಹುಮ್ಮಸ್ಸಿನಲ್ಲಿ ಮಾಡಿಕೊಳ್ಳುವ ಅನಾಹುತಗಳು, ಪ್ರೀತಿ, ಪ್ರೇಮ.. ಎಲ್ಲವೂ ಚಿತ್ರದಲ್ಲಿದೆ.
ಡೈನಮಿಕ್ ಸ್ಟಾರ್ ದೇವರಾಜ್‍ರ ಎರಡನೇ ಮಗ ಪ್ರಣಾಮ್ ದೇವರಾಜ್‍ಗೆ ಇದು ಮೊದಲನೇ ಸಿನಿಮಾ. ಚಿತ್ರದಲ್ಲಿ ಆ್ಯಕ್ಷನ್ ಇಲ್ಲವೇ ಇಲ್ಲ ಎಂದೇನೂ ಇಲ್ಲ. ಪ್ರೇಕ್ಷಕರಿಗೆ ಪ್ರಣಾಮ್