ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಸನ್ನಾ ಹೆಗಡೆ ನಿರ್ದೆಶಕ. ಅಂದಹಾಗೆ ಇವರಿಗೆ ಇದು ನಿರ್ದೇಶಕರಾಗಿ ಮೊದಲ ಅನುಭವ. ಆದರೆ, ಚಿತ್ರರಂಗಕ್ಕೆ ರಕ್ಷಿತ್ ಶೆಟ್ಟಿಗೆ ಇವರು ಹೊಸಬರೇನೂ ಅಲ್ಲ. ರಕ್ಷಿತ್ ಶೆಟ್ಟಿಗೆ ಹೆಸರು ತಂದು ಕೊಟ್ಟ ಉಳಿದವರು ಕಂಡಂತೆ ಚಿತ್ರದ ಬರಹಗಾರರಲ್ಲಿ ಇವರೂ ಒಬ್ಬರು. ಆದರೆ, ನಂತರ ಊರಿಗೆ ವಾಪಸ್ ಹೋದ ಸೆನ್ನಾ, 0-41 ಅನ್ನೋ ಸಾಕ್ಷ್ಯ ಚಿತ್ರ ನಿರ್ಮಿಸಿದ್ರು.
ಇದೆಲ್ಲಕ್ಕೂ ಮೊದಲು ಅಂತಾರಾಷ್ಟ್ರೀಯ ಜಾಹೀರಾತು ಕಂಪೆನಿಯಲ್ಲಿ 8 ವರ್ಷ, ಅಮೆರಿಕ, ದುಬೈಗಳಲ್ಲಿ ಬ್ಯುಸಿನೆಸ್ ಸಲಹೆಗಾರರಾಗಿ ಕೆಲಸ ಮಾಡಿದ ಅನುಭವವೂ ಇದೆ.
ಜಾಹೀರಾತು, ಬ್ಯುಸಿನೆಸ್ ಕ್ಷೇತ್ರಗಳಲ್ಲಿ ಸಕ್ಸಸ್ ಕಂಡಿದ್ದ ಸೆನ್ನಾಗೆ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ. ದಿಗಂತ್, ಪೂಜಾ ದೇವರಿಯಾ, ಅಶ್ವಿನ್ ರಾವ್, ಶ್ರೇಯಾ ಅಂಚನ್ ಮೊದಲಾದವರು ನಟಿಸಿದ್ದಾರೆ. 3 ಜನರೇಷನ್‍ಗಳ ಪ್ರೀತಿಯ ಕಥೆ ಚಿತ್ರದಲ್ಲಿದೆ.