ಪ್ರಣಮ್ ದೇವರಾಜ್ ಅಭಿನಯದ ಮೊದಲ ಸಿನಿಮಾ ಕುಮಾರಿ ರ್21 ರಿಲೀಸ್‍ಗೆ ರೆಡಿಯಾಗಿದೆ. ಆಗಸ್ಟ್ 3ಕ್ಕೆ ತೆರೆಗೆ ಬರುತ್ತಿದೆ. ಅದು ಲವ್ ಕಮ್ ರೊಮ್ಯಾಂಟಿಕಲ್ ಸಿನಿಮಾ. ನಿಧಿ ಕುಶಾಲಪ್ಪ ಮತ್ತು ಪ್ರಣಮ್ ದೇವರಾಜ್, ಈಗಿನ ಜನರೇಷನ್‍ನ ಹಾಟ್ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದ ಟೀಸರ್, ಟ್ರೇಲರ್‍ಗಳು ಬಿಸಿ ಬಿಸಿ ಸದ್ದು ಮಾಡುತ್ತಿವೆ. ಶ್ರೀಮಾನ್ ವೇಮುಲ ನಿರ್ದೇಶನದ ಸಿನಿಮಾ, ಈಗಿನ ಯುವ ಪೀಳಿಗೆಯ ಫಾರ್ವರ್ಡ್ ಲವ್ ಸ್ಟೋರಿ.
ಮೊದಲ ಸಿನಿಮಾ ರಿಲೀಸಾಗುತ್ತಿರುವ ಹೊತ್ತಿನಲ್ಲೇ 2ನೇ ಸಿನಿಮಾಗೆ ರೆಡಿಯಾಗಿದ್ದಾರೆ ಪ್ರಣಮ್. ಅದು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಲಿದೆಯಂತೆ. ಮೊದಲ ಸಿನಿಮಾದಲ್ಲಿಯೇ ನೀವು ಆ್ಯಕ್ಷನ್ ಮಾಸ್ ಸಿನಿಮಾ ಮಾಡಬೇಕಿತ್ತು ಎಂದು ಹಲವರು ಹೇಳಿದ್ದರಂತೆ. ಅವರ ಆ ಪ್ರಶ್ನೆಗಳಿಗೆಲ್ಲ 2ನೇ ಸಿನಿಮಾ ಉತ್ತರ ಕೊಡಲಿದೆ ಎಂದಿದ್ದಾರೆ ಪ್ರಣಮ್. ಸಾಯಿಶಿವಂತ್ ಎಂಬುವವರು ಆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.