` ರಚಿತಾ ರಾಮ್ ಚಿತ್ರರಂಗಕ್ಕೆ ಬಂದು 5 ವರ್ಷವಾಯ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rachitha ram completes 5 years ?
Rachitha Ram Image

ರಚಿತಾ ರಾಮ್, ಚಿತ್ರರಂಗಕ್ಕೆ ಬಂದು 5 ವರ್ಷವಾಗಿ ಹೋಯ್ತಾ..? ನಿನ್ನೆ ಮೊನ್ನೆ ಬಂದಂತೆ ಅನಿಸುತ್ತಿರುವ ರಚಿತಾ ರಾಮ್ ಅವರೇ ಈ ವಿಷಯವನ್ನು ಖುಷಿಖುಷಿಯಾಗಿ ಹೇಳಿಕೊಂಡಿದ್ದಾರೆ. ಈ 5 ವರ್ಷದಲ್ಲಿ ರಚಿತಾ ರಾಮ್ ಯಾವುದೇ ವಿವಾದಗಳಿಲ್ಲದೆ, ವಿನಾಕಾರಣದ ಯಾವುದೇ ಗಾಸಿಪ್‍ಗೆ ಸಿಲುಕಿಲ್ಲ ಎನ್ನವುದೇ ವಿಶೇಷ.

ದರ್ಶನ್ ಜೊತೆ ಬುಲ್‍ಬುಲ್‍ನಿಂದ ಬೆಳ್ಳಿತೆರೆಗೆ ಬಂದ ರಚಿತಾ, ಈಗ ಅಭಿಮಾನಿಗಳ ಪಾಲಿಗೆ ಡಿಂಪಲ್ ಕ್ವೀನ್. ಈ ಗುಳಿಗೆನ್ನೆಯ ಚೆಲುವೆ ಪುನೀತ್, ದರ್ಶನ್, ಸುದೀಪ್, ಧ್ರುವ ಸರ್ಜಾ, ದುನಿಯಾ ವಿಜಯ್, ಗಣೇಶ್, ಶ್ರೀಮುರಳಿ, ರಮೇಶ್ ಅರವಿಂದ್ ಮೊದಲಾದವರ ಜೊತೆ ನಟಿಸಿದ್ದಾರೆ. ನಟಿಸಿರುವುದೆಲ್ಲ ಸ್ಟಾರ್‍ಗಳ ಜೊತೆ ಎನ್ನುವುದೇ ವಿಶೇಷ. ಉಪೇಂದ್ರ ಮತ್ತು ನೀನಾಸಂ ಸತೀಶ್ ಜೊತೆ ನಟಿಸುತ್ತಿರುವ ಸಿನಿಮಾಗಳು ರಿಲೀಸ್ ಆಗಬೇಕು.

ಸದ್ಯಕ್ಕೆ ರಚಿತಾ ಅವರ ಕೈಲಿ 5 ಸಿನಿಮಾಗಳಿವೆ. ನಟಸಾರ್ವಭೌಮ, ಅಯೋಗ್ಯ, ಉಪ್ಪಿ ರುಪ್ಪಿ, ಸೀತಾರಾಮ ಕಲ್ಯಾಣ ಮತ್ತು ಐ ಲವ್ ಯು. ಇದರ ನಡುವೆಯೇ ಅವರಿಗೊಂದು ಮಹಿಳಾ ಪ್ರದಾನ ಚಿತ್ರದ ಆಫರ್ ಬಂದಿದೆಯಂತೆ.

ಇಲ್ಲಿಯವರಗೆ ಸಿಕ್ಕ ಪಾತ್ರಗಳಲ್ಲಿ ನಟಿಸಿದ್ದೇನೆ. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದೇನೆ. ಈಗ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದಿದ್ದಾರೆ ರಚಿತಾ. ಒಳ್ಳೆಯದಾಗಲಿ.