ಕಥೆಯೊಂದು ಶುರುವಾಗಿದೆ.. ಚಿತ್ರದ ನಾಯಕಿ ಪೂಜಾ ದೇವರಿಯಾ. ಪೂಜಾ ಅವರ ತಾಯಿ ಕನ್ನಡದವರಾದರೂ, ಹುಟ್ಟಿದ್ದು, ಬೆಳೆದಿದ್ದು ತಮಿಳುನಾಡಿನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ನಿರ್ದೇಶಕಿ ಸೆನ್ನಾ ಕಥೆ ಹೇಳಿದಾಗ ಇಷ್ಟವಾಯ್ತು. ನನ್ನ ಅಜ್ಜಿ ಮತ್ತು ಸ್ನೇಹಿತರ ಸಹಾಯದಿಂದ ಕನ್ನಡ ಕಲಿತಿದ್ದಷ್ಟೇ ಅಲ್ಲ, ಸೆಟ್‍ನಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ ಎಂದು ನೆನಪು ಹಂಚಿಕೊಂಡಿದ್ದಾರೆ ಪೂಜಾ ದೇವರಿಯಾ.
ಚಿತ್ರದ ಡೈಲಾಗುಗಳೂ ಇಷ್ಟವಾದವು. ನಾಯಕಿಯಾಗಿ ನಟಿಸಿರುವುದಷ್ಟೇ ಅಲ್ಲ, ಗುಡ್‍ಮಾರ್ನಿಂಗ್ ಹಾಡಿಗೆ ಕೊರಿಯಾಗ್ರಫಿ ಕೂಡಾ ಮಾಡಿದ್ದೇನೆ. ಸಹಜವಾದ ಸ್ಟೆಪ್ಪುಗಳನ್ನೇ ಬಳಸಿ ಹಾಡು ಮಾಡಿದ್ದೇವೆ ಎಂದು ಹಾಡಿನ ಬಗ್ಗೆಯೂ ಹೇಳಿಕೊಂಡಿದ್ದಾರೆ ಪೂಜಾ.
ಕನ್ನಡದಲ್ಲಿ ಉಚ್ಚಾರಣೆ ತಪ್ಪಾದಾಗ,ನಾಯಕ ದಿಗಂತ್ ತಿದ್ದುತ್ತಿದ್ದರಂತೆ. ಚಿತ್ರದಲ್ಲಿ ನನ್ನದು ಮಹತ್ವಾಕಾಂಕ್ಷೆಯ ಹುಡುಗಿಯ ಪಾತ್ರ. 4 ದಿನಗಳಲ್ಲಿ ನಡೆಯುವ ಕಥೆಯನ್ನೇ ಸಿನಿಮಾ ಮಾಡಲಾಗಿದೆ. ಚಿತ್ರದ ಬಗ್ಗೆ ಭಾರಿ ಕುತೂಹಲವಿದೆ ಎಂದಿದ್ದಾರೆ ಪೂಜಾ.
ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದ ಬಗ್ಗೆ ಪೂಜಾ ಅವರಿಗಷ್ಟೇ ಅಲ್ಲ, ಕನ್ನಡ ಚಿತ್ರರಸಿಕರಿಗೂ ಕುತೂಹಲವಿದೆ.