ಬಾಲಿವುಡ್ ನಟ, ಕರ್ನಾಟಕದ ಅಳಿಯನೂ ಅಗಿರುವ ವಿವೇಕ್ ಒಬೇರಾಯ್ ರುಸ್ತುಂ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸುತ್ತಿದ್ದಾರೆ. ಶಿವರಾಜ್ಕುಮಾರ್ ಅಭಿನಯಿಸುತ್ತಿರುವ, ರವಿವರ್ಮ ನಿರ್ದೇಶನದ ರುಸ್ತುಂನಲ್ಲಿ ವಿವೇಕ್ ಒಬೇರಾಯ್ ನಟಿಸುವುದು ಪಕ್ಕಾ ಆಗಿದೆ. ಸ್ವತಃ ರವಿವರ್ಮ ಅವರೇ ಈ ಸುದ್ದಿ ತಿಳಿಸಿದ್ದಾರೆ.
ವಿವೇಕ್ ಒಬೇರಾಯ್ ಚಿತ್ರದಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ನಿರ್ದೇಶಕರು ಗುಟ್ಟಾಗಿಯೇ ಇಟ್ಟಿದ್ದಾರೆ. ವಿಲನ್ ಪಾತ್ರ ಇರಬಹುದಾ..? ಊಹೆ ನಿಮಗೇ ಬಿಟ್ಟಿದ್ದು.