ನಾಗಮಂಡಲ ವಿಜಯಲಕ್ಷ್ಮಿ, ಮತ್ತೊಮ್ಮೆ ವೃತ್ತಿ ಜೀವನ ಆರಂಭಿಸಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಯಾವುದೇ ಪಾತ್ರದಲ್ಲಾದರೂ ಸೈ, ನಟಿಸೋಕೆ ರೆಡಿ ಎಂದು ಕಣ್ಣೀರಿಟ್ಟಿದ್ದ ವಿಜಯಲಕ್ಷ್ಮಿಗೆ, ವಿನೋದ್ ಪ್ರಭಾಕರ್ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ನೂತನ್ ಉಮೇಶ್ ನಿರ್ದೇಶನದ ಫೈಟರ್ ಸಿನಿಮಾದಲ್ಲಿ ವಿಜಯಲಕ್ಷ್ಮಿ ಜಿಲ್ಲಾಧಿಕಾರಿಯಾಗಿ ಹಾಗೂ ವಿನೋದ್ ಪ್ರಭಾಕರ್ ತಾಯಿಯಾಗಿ ನಟಿಸಲಿದ್ದಾರೆ.
ಚಿತ್ರದ ಪಾತ್ರಕ್ಕೆ ಸಹಜ ಸುಂದರ ನಟಿಯೊಬ್ಬರು ಬೇಕಿತ್ತು. ಅವರನ್ನು ನನ್ನ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡ ಪ್ರೇಕ್ಷಕರಿಗೆ ತೋರಿಸುತ್ತಿದ್ದೇನೆ ಎನ್ನುವುದೇ ನನಗೊಂದು ಹೆಮ್ಮೆ ಎಂದಿದ್ದಾರೆ ನಿರ್ದೇಶಕ ನೂತನ್ ಉಮೇಶ್. ಸೋಮಶೇಖರ್ ನಿರ್ಮಾಣದ ಚಿತ್ರದ ಚಿತ್ರೀಕರಣ ಶುರುವಾಗಿದೆ.