ಅಭಿಮಾನಿಗಳ ಬಹುಕಾಲದ ನಿರೀಕ್ಷೆ ಒಂದೊಂದಾಗಿ ಈಡೇರುತ್ತಿದೆ. ದಿ ವಿಲನ್ ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ವಿಡಿಯೋ ಸಾಂಗ್ ಅಲ್ಲ, ಲಿರಿಕಲ್ ಸಾಂಗ್. ಮಚ್ಚು ಗಿಚ್ಚು ಹಿಡಿದವನಲ್ಲ.. ಆದ್ರೂ ಹವಾ ಇಟ್ಟವನಲ್ಲ ಎಂದು ಶುರುವಾಗುವ ಹಾಡು, ಪ್ರೇಕ್ಷಕರಿಗೆ ಇಷ್ಟವಾಗಿದೆ.
ದಿ ವಿಲನ್ ಚಿತ್ರದ ಟೈಟಲ್ ಸಾಂಗ್ ಆಗಿರುವ ಈ ಹಾಡು, ಬಹುಶಃ ಇಂಟ್ರೊಡಕ್ಷನ್ ಹಾಡಿರಬೇಕು. ಈ ಇಂಟ್ರೊಡಕ್ಷನ್ ಹಾಡು ಯಾರದ್ದು..? ಸುದೀಪ್‍ಗಾ..? ಶಿವರಾಜ್‍ಕುಮಾರ್‍ಗಾ..? ಅದೊಂದು ಕುತೂಹಲವನ್ನು ಪ್ರೇಮ್ ಹಾಗೆಯೇ ಉಳಿಸಿಕೊಂಡಿದ್ದಾರೆ.
ಹಾಡಿಗೆ ಸಾಹಿತ್ಯ ಬರೆದಿರುವುದು ಪ್ರೇಮ್. ಹಾಡಿರುವುದು ಶಂಕರ್ ಮಹಾದೇವನ್ ಮತ್ತು ಬಸ್ರು. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡನ್ನು ಒಂದೇ ದಿನದಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿ ನೋಡಿರುವುದು ವಿಶೇಷ.
ಸಿ.ಆರ್.ಮನೋಹರ್ ಅವರ ತನ್ವಿ ಫಿಲಂಸ್ ಲಾಂಛನದಲ್ಲಿ ಬರುತ್ತಿರುವ ಸಿನಿಮಾಗೆ ಆ್ಯಮಿ ಜಾಕ್ಸನ್ ನಾಯಕಿ. ಮಿಥುನ್ ಚಕ್ರವರ್ತಿ, ಶ್ರೀಕಾಂತ್, ತಿಲಕ್ ಮೊದಲಾದವರು ನಟಿಸಿರುವ ಸಿನಿಮಾ, ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.