` ನೆಗೆಟಿವ್ ಪಾತ್ರ ಕೈಬಿಟ್ಟ ರಾಘವೇಂದ್ರ ರಾಜ್‍ಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raghavendra rajkumar not doing negative shade in chillum
Raghavendra Rajkumar Image

ಚಿಲಂ. ಮನೋರಂಜನ್ ರವಿಚಂದ್ರನ್ ನಟಿಸುತ್ತಿರುವ ಈ ಸಿನಿಮಾವನ್ನು ರಾಘವೇಂದ್ರ ರಾಜ್‍ಕುಮಾರ್ ಕೈಬಿಟ್ಟಿದ್ದಾರೆ. ಹಲವು ವರ್ಷಗಳ ನಂತರ ರಾಘವೇಂದ್ರ ರಾಜ್‍ಕುಮಾರ್ ನಟಿಸಬೇಕಿದ್ದ ಚಿತ್ರ ಅದು. ನೆಗೆಟಿವ್ ಶೇಡ್ ಇರುವ ಆ ಪಾತ್ರದಲ್ಲಿ ನಟಿಸೋಕೆ ಸ್ವತಃ ಅವರೇ ಆಸಕ್ತಿ ತೋರಿಸಿದ್ದರು. ಆದರೆ, ಈಗ ಚಿತ್ರದಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣ ಅಭಿಮಾನಿಗಳಂತೆ.

ಕೆಲವೊಂದಿಷ್ಟು ಅಭಿಮಾನಿಗಳು, ಒಂದು ದಿನ ನೇರ ಮನೆಗೇ ಬಂದು, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಬೇಡಿ ಎಂದು ಬೇಡಿಕೆಯಿಟ್ಟರಂತೆ. ಆ ಪಾತ್ರದಲ್ಲಿ ಸಿಗರೇಟ್ ಸೇದುವ, ಕುಡಿಯುವ ದೃಶ್ಯಗಳಿದ್ದವು. ಅವನ್ನೆಲ್ಲ ನೀವು ಮಾಡಬೇಡಿ ಎಂದು ಅಭಿಮಾನಿಗಳು ಹಠ ಹಿಡಿದರು. ನಾನು ನಿರ್ದೇಶಕರಿಗೆ ಹೇಳಿದೆ. ಅವರು ಬದಲಾವಣೆಗೂ ಸಿದ್ಧ ಎಂದರು. ಆದರೆ, ನನಗಾಗಿ ಪಾತ್ರದಲ್ಲಿ ಬದಲಾವಣೆ ಮಾಡಬೇಡಿ, ಪಾತ್ರಕ್ಕೆ ಸೂಕ್ತವೆನಿಸಿದರೆ ಬೇರೆಯವರಿಂದ ಮಾಡಿಸಿ ಎಂದು ಹೇಳಿದೆ ಎಂದು ತಿಳಿಸಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

ಸದ್ಯಕ್ಕೆ ರಾಘವೇಂದ್ರ ರಾಜ್‍ಕುಮಾರ್ ಅಮ್ಮನ ಮನೆ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದು, ಆ ಸಿನಿಮಾ ಅವರ ಹುಟ್ಟುಹಬ್ಬದ ದಿನ, ಆಗಸ್ಟ್ 15ರಂದು ಸೆಟ್ಟೇರಲಿದೆ. ನಿಖಿಲ್ ಮಂಜು ನಿರ್ದೇಶನವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery