ಚಿಕ್ಕಣ್ಣ ಅನ್ನೋ ಹೆಸರು ಕೇಳಿದ್ರೇನೇ ಮುಗುಳ್ನಗುವ ಜನರಿದ್ದಾರೆ. ಅಷ್ಟರಮಟ್ಟಿಗೆ ಚಿಕ್ಕಣ್ಣ ಕಾಮಿಡಿಗೆ ಫಿಕ್ಸ್. ಬಿಡುವೇ ಇಲ್ಲದ ನಟರಾಗಿರುವ ಚಿಕ್ಕಣ್ಣ, ಡಬಲ್ ಎಂಜಿನ್ ಚಿತ್ರದಲ್ಲಿ ಹೆಚ್ಚೂ ಕಡಿಮೆ ಹೀರೋನೇ. ಸುಮನ್ ರಂಗನಾಥ್ ಜೊತೆ ನಟಿಸಿರುವ ಚಿಕ್ಕಣ್ಣ, ಈ ಚಿತ್ರದಲ್ಲೂ ಕಾಮಿಡಿ ರೋಲ್ ಮಾಡಿದ್ದಾರಂತೆ.
ಚಿತ್ರದಲ್ಲಿ ಸಂಭಾಷಣೆಗಳಿಗಿಂತ ಸನ್ನಿವೇಶಗಳೇ ನಗು ತರಿಸುವಂತಿವೆ. ಭಾವುಕ ಸನ್ನಿವೇಶದಲ್ಲೂ ಪ್ರೇಕ್ಷಕ ನಗುತ್ತಾನೆ. ಅದೇ ಈ ಚಿತ್ರದ ಸ್ಟ್ರೆಂಗ್ತ್ ಅಂತಾರೆ ಚಿಕ್ಕಣ್ಣ. ಇಷ್ಟೆಲ್ಲ ಆಗಿ ಚಿಕ್ಕಣ್ಣಂಗಿರೋ ಅತಿ ದೊಡ್ಡ ಆಸೆಯೇನು ಗೊತ್ತಾ..?
ನಾನು ವಿಲನ್ ಆಗಬೇಕು ಎಂದು ಚಿತ್ರರಂಗಕ್ಕೆ ಬಂದವನು. ಆದರೆ ಕಾಮಿಡಿಯನ್ ಆಗಿಬಿಟ್ಟೆ. ಈಗ ನಾನು ಮಾಡ್ತೀನಿ ಅಂದ್ರೂ ಯಾರೂ ಅಂತಹ ಸಾಹಸ ಮಾಡೋದಿಲ್ಲ ಬಿಡಿ ಅಂತಾರೆ ಚಿಕ್ಕಣ್ಣ.
ಚಿಕ್ಕಣ್ಣ ನಿರಾಶರಾಗಬೇಕಾದ ಅಗತ್ಯವೇನಿಲ್ಲ. ಖಳನಟರೆಂದರೆ ಇವರೇ ಎನ್ನುವಂತಿದ್ದ ವಜ್ರಮುನಿ, ತೂಗುದೀಪ ಶ್ರೀನಿವಾಸ್, ದೊಡ್ಡಣ್ಣ.. ಕಾಮಿಡಿ ಮಾಡಿ ಗೆದ್ದಿದ್ದಾರೆ. ಕಾಮಿಡಿ ಎಂದರೆ ಬಾಲಕೃಷ್ಣ ಎನ್ನುತ್ತಿದ್ದ ಕಾಲದಲ್ಲೇ ಅವರು ವಿಲನ್ ಆಗಿ ಗೆದ್ದಿದ್ದಾರೆ. ಡೋಂಟ್‍ವರಿ