ಆ ಕರಾಳ ರಾತ್ರಿ. ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ. ಚಿತ್ರವನ್ನು ಪ್ರೀಮಿಯರ್ ಶೋನಲ್ಲಿ ನೋಡಿದವರು ಚಿತ್ರದ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ದಯಾಳ್ ನಿರ್ದೇಶನದಲ್ಲಿ ಇದು ಅತ್ಯುತ್ತಮ ಸಿನಿಮಾ ಎನ್ನುತ್ತಿದ್ದಾರೆ. ಆ್ಯಕ್ಟರ್, ಹಗ್ಗದ ಕೊನೆ ಮೊದಲಾದ ಚಿತ್ರಗಳ ಮೂಲಕ ಅರ್ಟ್ ಮತ್ತು ಕಮರ್ಷಿಯಲ್ ಚಿತ್ರಗಳ ನಡುವೆ ಬ್ರಿಡ್ಜ್ ಕಟ್ಟುವ ಪ್ರಯತ್ನ ಮಾಡಿದ್ದ ದಯಾಳ್, ಈ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕ್ರೈಂ ಥ್ರಿಲ್ಲರ್ ಕಥೆಯನ್ನು ಭಾವನೆಗಳೊಂದಿಗೆ ಹೆಣೆದಿದ್ದಾರೆ.
ಸಿನಿಮಾ ದೊಡ್ಡದಲ್ಲ. 101 ನಿಮಿಷದ ಸಿನಿಮಾ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ. ಚಿತ್ರ ನೋಡುತ್ತಿರುವಷ್ಟೂ ನಿಮ್ಮ ಎದೆಬಡಿತದ ಸದ್ದು ನಿಮಗೆ ಕೇಳಿಸುತ್ತೆ ಅನ್ನೊದು ಚಿತ್ರದ ಥ್ರಿಲ್ಲರ್ ಕಸುಬುದಾರಿಕೆಗೆ ಸಾಕ್ಷಿ. ಚಿತ್ರವನ್ನ ಕಿಚ್ಚ ಸುದೀಪ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಮೆಚ್ಚಿಕೊಂಡಿದ್ದಾರೆ.
ದಯಾಳ್ ನಿರ್ದೇಶನ, ಜೆಕೆ, ಅನುಪಮಾ ಗೌಡ, ರಂಗಾಯಣ ರಘು, ವೀಣಾ ಸುಂದರ್ ಅಭಿನಯ, ಬಿಗಿಯಾದ ಚಿತ್ರಕಥೆ.. ಎಲ್ಲವೂ ಇಷ್ಟವಾಗಿದೆ. ಪ್ರೇಕ್ಷಕರಿಗೂ ಅದು ಮೆಚ್ಚುಗೆಯಾದರೆ, ದಯಾಳ್ ಗೆದ್ದಂತೆ. ಗೆಲ್ಲಲಿ.