` ಮೀನಿಂಗ್ ಡಬ್ಬಲ್ಲು.. ಸಿನಿಮಾ ಸಿಂಗಲ್ಲು.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
double engine's double meaning creates craze
Double Engine Movie Image

ಡಬಲ್ ಎಂಜಿನ್.. ಹೆಸರು ಕೇಳಿದ್ರೇನೇ ಏನೋ ಒಂಥರ ಇದ್ಯಲ್ಲ ಅನ್ನಿಸಬಹುದು. ಬಾಂಬೆ ಮಿಠಾಯಿ ಅನ್ನೋ ಸಿನಿಮಾ ಮಾಡಿದ್ದ ನಿರ್ದೇಶಕ ಚಂದ್ರಮೋಹನ್ ಅವರ 2ನೇ ಸಿನಿಮಾ ಇದು. ಕಾಮಿಡಿಯೇ ಕಥೆ. ಚಿಕ್ಕಣ್ಣ, ಸುಮನ್ ರಂಗನಾಥ್, ಪ್ರಭು, ಅಶೋಕ್ ನಟಿಸಿರುವ ಸಿನಿಮಾ.

ಚಿಕ್ಕಣ್ಣಂಗೂ, ಸುಮನ್‍ಗೂ ಮ್ಯಾಚಿಂಗ್ ಇರೋದೇನು.. ಸುಮನ್‍ದೂ ಗುಂಗುರು... ಚಿಕ್ಕಣ್ಣಂದೂ ಗುಂಗುರು.. ಕೂದಲು..!

ಹುಡುಗಿಯನ್ನ ಹುಡುಗ ನೋಡಿ ಇಷ್ಟಪಟ್ಟ. ಏನ್ ನೋಡಿ ಇಷ್ಟ ಪಟ್ಟ.. ಸ್ಸಾರಿ.. ಅವನ್ನೆಲ್ಲ ಹೇಳೊಕಾಗಲ್ಲ..

ರೀಮೋಟ್ ತುಂಬಾ ಹಳೇದು ಅನ್ಸುತ್ತೆ.. ಟಿವಿ ಕೂಡಾ ತುಂಬಾ ಹಳೇದೇ..

ರೂಮ್‍ಗೆ ಹೋಗಿ ಸೋಪ್ ಹಾಕಿ.. ಈಸಿಯಾಗಿ ಬಂದ್‍ಬಿಡುತ್ತೆ..

ಇದರಲ್ಲಿ ಡಬಲ್ ಮೀನಿಂಗ್ ಎಲ್ಲಿದೆ ಅನ್ನೋವ್ರು ಒಂದ್ಸಲ ಕಿವಿ ತೆರೆದುಕೊಂಡು ಡಬಲ್ ಎಂಜಿನ್ ಟ್ರೇಲರ್ ನೋಡಬೇಕು. ಆಮೇಲೆ.. ನೀವು ಸಿನಿಮಾ ನೋಡೇ ನೋಡ್ತೀರಿ ಬಿಡಿ. 

ಹಾಗಂತ ಸಿನಿಮಾ ಕಂಪ್ಲೀಟ್ ಅದೇ ಇರಲ್ಲ. ಒಂದು ಸೀರಿಯಸ್ಸಾದ ಕ್ರೈಂ ಥ್ರಿಲ್ಲರ್ ಕಥೆಯೂ ಇದೆ. ಕಚಗುಳಿ ಇಡುವ ಸಂಭಾಷಣೆ. ನೆನಪಿಸಿಕೊಂಡು ಮುಗುಳ್ನಗುವಂಥಾ ಡೈಲಾಗುಗಳು. ಡಬಲ್ ಎಂಜಿನ್ ಗೆಲ್ಲಿಸೋಕೆ ಇಷ್ಟು ಸಾಕಾ..?