ಈ ಕಾಂಬಿನೇಷನ್ನೇ ಕುತೂಹಲ. ಪಿ.ವಾಸು, ಕನ್ನಡದಲ್ಲಿ ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯ, ಶಿವಲಿಂಗದಂತಹಾ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ. ಶಿವರಾಜ್‍ಕುಮಾರ್ ಸೆಂಚುರಿ ಸ್ಟಾರ್. ಕನ್ನಡಿಗರ ಪ್ರೀತಿಯ ಕುಳ್ಳ ದ್ವಾರಕೀಶ್, ಈಗಾಗಲೇ 51 ಸಿನಿಮಾ ನಿರ್ಮಿಸಿರುವ ನಿರ್ಮಾಪಕ. ಇವರೆಲ್ಲರೂ ಒಂದಾಗುತ್ತಿರುವುದೇ ಈ ಬಾರಿಯ ವಿಶೇಷ.
ದ್ವಾರಕೀಶ್ ಅವರ 52ನೇ ಸಿನಿಮಾಗೆ ನಿರ್ದೇಶನದ ಹೊಣೆ ಹೊತ್ತಿರುವುದು ಪಿ.ವಾಸು. ಆಪ್ತಮಿತ್ರ ನಂತರ ದ್ವಾರಕೀಶ್ ಬ್ಯಾನರ್‍ನಲ್ಲಿ ಮಾಡುತ್ತಿರುವ ಸಿನಿಮಾ ಅದು. ಹೀರೋ, ಶಿವರಾಜ್‍ಕುಮಾರ್. ಶಿವಣ್ಣಂಗೆ ಇದು ದ್ವಾರಕೀಶ್ ಬ್ಯಾನರ್‍ನಲ್ಲಿ ಮೊದಲ ಸಿನಿಮಾ ಹಾಗೆಯೇ ಶಿವಲಿಂಗ ನಂತರ ವಾಸು ಜೊತೆ 2ನೇ ಸಿನಿಮಾ. ಸೂಪರ್ ಹಿಟ್ ಕಾಂಬಿನೇಷನ್ ಜೊತೆಗೂಡಿದಾಗ, ನಿರೀಕ್ಷೆಗಳು ಕೂಡಾ ಆಕಾಶದೆತ್ತರಕ್ಕೇ ಇರುತ್ತವೆ.