` ಕರಾಳ ರಾತ್ರಿಯ ದಯಾಳ್‍ಗೆ ಜೆಕೆ ಥ್ಯಾಂಕ್ಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
karala ratri actors praise dayal
Dayal Padmanabhan Image

ಆ ಕರಾಳ ರಾತ್ರಿ. ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರುವ ವಿಮರ್ಶೆಗಳನ್ನ ನೋಡಿ, ಥ್ರಿಲ್ಲಾಗಿರೋದು ಜೆಕೆ ಅಲಿಯಾಸ್ ಜಯ ಕಾರ್ತಿಕ್. ಈ ಚಿತ್ರದಲ್ಲಿ ತಾವು ನಟಿಸಿದ್ದರೂ, ಚಿತ್ರದ ಆತ್ಮ, ಹೃದಯ ಎಲ್ಲವೂ ದಯಾಳ್ ಅನ್ನೋದು ನಾಯಕ ನಟ ಜೆಕೆ ಸರ್ಟಿಫಿಕೇಟ್. ನಿರ್ದೇಶಕರಾಗಿ ದಯಾಳ್ ನನ್ನನ್ನೇ ಏಕೆ ಆಯ್ಕೆ ಮಾಡಿಕೊಂಡರು ಅನ್ನೋದು ಪಾತ್ರ ನೋಡಿದ ಮೇಲೆ ಗೊತ್ತಾಯ್ತು. ದಯಾಳ್‍ಗೆ ಅಂತಾದ್ದೊಂದು ದೃಷ್ಟಿಕೋನವಿದೆ ಅಂತಾರೆ ಜೆಕೆ.

ಒಬ್ಬ ನಟನಾಗಿ ನಮಗೆ ಏನೇ ಕ್ರೆಡಿಟ್ ಸಿಕ್ಕರೂ, ಅದು ಸಲ್ಲಬೇಕಿರೋದು ನಿರ್ದೇಶಕರಿಗೆ. ಧಾರಾವಾಹಿಗಳಾದ ಅಶ್ವಿನಿ ನಕ್ಷತ್ರ, ಹಿಂದಿಯ ಸಿಯಾ ಕೆ ರಾಮ್, ಕೆಂಪೇಗೌಡ ಚಿತ್ರದ ಪುಟ್ಟ ಪಾತ್ರ.. ಹೀಗೆ ನಾನು ಮೆಚ್ಚುಗೆ ಗಳಿಸಿದ ಪ್ರತಿ ಚಿತ್ರದ ಹಿಂದೆಯೂ ಇರೋದು ನಿರ್ದೇಶಕರೇ. ಈ ಚಿತ್ರದಲ್ಲಂತೂ ದಯಾಳ್ ಅದ್ಭುತವಾಗಿ ಸಿನಿಮಾ ತೆರೆಗೆ ತಂದಿದ್ದಾರೆ ಅನ್ನೋದು ಜೆಕೆ ಮಾತು.

ಚಿತ್ರದಲ್ಲಿ ಜೆಕೆಯವರದ್ದು ಶ್ರೀಮಂತನ ಪಾತ್ರ. ಸಿಕ್ಕಾಪಟ್ಟೆ ದುಡ್ಡಿರೋ, ಟ್ರಾವೆಲಿಂಗ್ ಮಾಡುತ್ತಾ ಜೀವನವನ್ನು ಎಂಜಾಯ್ ಮಾಡುವ ವ್ಯಕ್ತಿ. ಆಕಸ್ಮಿಕವಾಗಿ ಒಂದು ರಾತ್ರಿಯನ್ನು ರಂಗಾಯಣ ರಘು, ವೀಣಾ ಸುಂದರ್ ಹಾಗೂ ಅನುಪಮಾ ಗೌಡ ಅವರ ಮನೆಯಲ್ಲಿ ಕಳೆಯುತ್ತಾನೆ.ಆದರೆ, ಅದು ಕರಾಳ ರಾತ್ರಿಯಾಗುತ್ತೆ. ಹೇಗೆ... ಅದನ್ನು ದಯಾಳ್ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಥಿಯೇಟರ್‍ನಲ್ಲಿದೆ.