ಡಬಲ್ ಎಂಜಿನ್.. ಈ ಪದ ಜನಸಾಮಾನ್ಯರಿಗೆ ಹೊಸದಾಗಿ ಕೇಳಿಸಬಹುದು. ಆದರೆ, ಅದೃಷ್ಟದ ಚೊಂಬು (ರೈಸ್ ಬೌಲ್), ನಕ್ಷತ್ರದ ಆಮೆ, ಎರಡು ತಲೆಯ ಹಾವು (ಡಬಲ್ ಎಂಜಿನ್) ದಂಧೆ ಮಾಡೋವ್ರಿಗೆ ಇದು ಚಿರಪರಿಚಿತ ಪದ. ಎರಡು ತಲೆ ಹಾವು ಇಲ್ಲ. ಆದರೆ, ಹಾಗಂತ ಮೋಸ ಮೋಡೋವ್ರಿಗೇನೂ ಕಮ್ಮಿ ಇಲ್ಲ. ಅವರು ಎರಡು ತಲೆ ಹಾವನ್ನ ಡಬಲ್ ಎಂಜಿನ್ ಅಂತಾರೆ. ಆದರೆ, ಈಗ ಡಬಲ್ ಎಂಜಿನ್ ಇದೆ. ಇದೇ ಶುಕ್ರವಾರ ನೀವದನ್ನ ತೆರೆ ಮೇಲೆ ನೋಡಬಹುದು.
ಇದು ಡಬಲ್ ಎಂಜಿನ್ ಸಿನಿಮಾ ಕಥೆ. ಮೂವರು ಹುಡುಗರ ಗ್ಯಾಂಗು, ಅದು ಪಡುವ ಪಡಿಪಾಟಲಿನ ಕಥೆ. ಕ್ರೈಂ, ಥ್ರಿಲ್ಲರ್ ಕಾಮಿಡಿ ಜೊತೆ ಜೊತೆಯಾಗಿ ಸಾಗುತ್ತೆ. ಕಚಗುಳಿ ಇಡೋ ಸಂಭಾಷಣೆಗಳಿವೆ. ಕಣ್ಣು ಖುಷಿಪಡಿಸೋಕೆ ಸುಮನ್ ರಂಗನಾಥ್, ಕಿವಿ ತೃಪ್ತಿ ಪಡಿಸೋಕೆ ಚಿಕ್ಕಣ್ಣನ ಮಾತು.. ಪಂಚೇಂದ್ರಿಯಗಳಲ್ಲೂ ಆಹ್ಲಾದ ಹೊರಡಿಸೋಕೆ ಇಡೀ ಸಿನಿಮಾ.
ಇದು ಬಾಂಬೆ ಮಿಠಾಯಿ ಸಿನಿಮಾ ನಿರ್ದೇಶಕರ ಹೊಸ ಸಿನ್ಮಾ. ಇಷ್ಟೆಲ್ಲದರ ಜೊತೆಗೆ ಕೃಷಿಯಲ್ಲೂ ಲಾಭವಿದೆ ಅನ್ನೋ ಸಂದೇಶವಿದೆಯಂತೆ.