ಸುಮನ್ ರಂಗನಾಥ್... ವಯಸ್ಸು 50ರ ಹತ್ತಿರದಲ್ಲಿದ್ದರೂ, ಗ್ಲ್ಯಾಮರ್ ಬದಲಾಗಿಲ್ಲ. ಮಾಡೆಲಿಂಗ್ ಲೋಕದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದ ಸುಮನ್ ರಂಗನಾಥ್‍ಗೆ, ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಸಿದ್ಲಿಂಗು, ನೀರ್‍ದೋಸೆ, ಮೈನಾ ಚಿತ್ರಗಳ ಪಾತ್ರಗಳು ಸುಮನ್‍ರ ವೃತ್ತಿ ಜೀವನ ಬದಲಿಸಿರುವುದು ಸತ್ಯ. ಇಂತಹ ಸುಮನ್, ಇದೇ ಮೊದಲ ಬಾರಿಗೆ ಕಾಮಿಡಿ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಡಬಲ್ ಎಂಜಿನ್ ಚಿತ್ರದಲ್ಲಿ.
ಈ ಹಿಂದೆ ಕೆಲವು ಚಿತ್ರಗಳಲ್ಲಿ ಕಾಮಿಡಿ ಮಾಡಿದ್ದರೂ, ಅವುಗಳೆಲ್ಲ ಕೆಲವು ದೃಶ್ಯಗಳಿಗೆ ಸೀಮಿತವಾಗಿತ್ತು. ಸಂಪೂರ್ಣ ಕಾಮಿಡಿ ಪಾತ್ರದಲ್ಲಿ ನಟಿಸಿರೋದು ಇದೇ ಮೊದಲು. ಹಳ್ಳಿ ಹೆಂಗಸು. ಆದರೆ ಗ್ಲ್ಯಾಮರಸ್ ಆಗಿದೆ. ಹಣ ಮಾಡುವ ಆಸೆಗೆ ಹುಡುಗರ ತಂಡದ ಜೊತೆ ಸೇರುವ ಮಹಿಳೆಯಾಗಿ ನಟಿಸಿದ್ದೇನೆ. ಪಾತ್ರ ನನಗಂತೂ ತುಂಬಾನೇ ಹಿಡಿಸಿದೆ ಎಂದು ಖುಷಿಯಾಗಿದ್ದಾರೆ ಸುಮನ್.
ಚಂದ್ರಮೋಹನ್ ಕಥೆ ಹೇಳಿದ ತಕ್ಷಣ ಇಷ್ಟವಾಗಿ ಚಿತ್ರ ಒಪ್ಪಿಕೊಂಡರಂತೆ. ಎಲ್ಲ ಓಕೆ, ವಾಟ್ ಈಸ್ ಯುವರ್ ಸೌಂಧರ್ಯದ ಗುಟ್ಟು ಅಂದ್ರೆ, ಕೆಲಸದಲ್ಲಿ ಶ್ರದ್ಧೆ, ಕಣ್ತುಂಬಾ ನಿದ್ದೆ. ಹೊಟ್ಟೆ ತುಂಬಾ ಊಟ. ನೋ ಬ್ಯಾಡ್ ಹ್ಯಾಬಿಟ್ಸ್ ಅಂತಾರೆ ಸುಮನ್.