ಆ ಕರಾಳ ರಾತ್ರಿ. ಈ ಚಿತ್ರ ಮೊಳಕೆಯೊಡೆದಿದ್ದೇ ಬಿಗ್‍ಬಾಸ್ ಮನೆಯಲ್ಲಿ. ಬಿಗ್‍ಬಾಸ್ ಮನೆಯಲ್ಲಿದ್ದಾಗ ದಯಾಳ್, ತಮ್ಮೊಂದಿಗಿದದ ಅನುಪಮಾ ಮತ್ತು ಜಯಕೀರ್ತಿಗೆ ಈ ಕಥೆ ಹೇಳಿದ್ದರಂತೆ. ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಚಿತ್ರಕ್ಕೆ ನೀವೇ ಹೀರೋ, ಹೀರೋಯಿನ್ ಎಂದಿದ್ದರಂತೆ. ಜೆಕೆಗೆ ಇಷ್ಟವಾಗಿದ್ದುದು ಆ ಕರಾಳ ರಾತ್ರಿ ಕಥೆ.
ಕಥೆ ಡಿಫರೆಂಟ್ ಆಗಿತ್ತು. ಆದರೆ, ದಯಾಳ್ ಸಿನಿಮಾ ಮಾಡ್ತಾರಾ ಅನ್ನೋ ಅನುಮಾನವೂ ಇತ್ತು. ಆದರೆ, ಬಿಗ್‍ಬಾಸ್‍ನಿಂದ ಬಂದ ಮೇಲೆ ನನಗೇ ಗೊತ್ತಿಲ್ಲದಂತೆ ಸಿನಿಮಾ ಅನೌನ್ಸ್ ಮಾಡಿ ಸರ್‍ಪ್ರೈಸ್ ಕೊಟ್ಟರು ಎಂದಿದ್ದಾರೆ ಜೆಕೆ.
ಚಿತ್ರಕ್ಕಾಗಿ ಇದೇ ಮೊದಲ ಬಾರಿಗೆ ಜೆಕೆ ಗೆಟಪ್ ಬದಲಾಗಿದೆ. ರೆಟ್ರೊ ಲುಕ್‍ನಲ್ಲಿ ಲಾಂಗ್ ಹೇರ್, ದಪ್ಪ ಮೀಸೆ, ಕಾಸ್ಟ್ಯೂಮ್ ಬದಲಿಸಿಕೊಂಡಿದ್ದಾರೆ. ಚಿತ್ರದ ಪ್ರತಿ ಡೈಲಾಗ್‍ನ್ನೂ ಎಂಜಾಯ್ ಮಾಡಿದ್ದೇನೆ. ಡೈಲಾಗುಗಳು ವಿಭಿನ್ನವಾಗಿವೆ. ದಯಾಳ್ ಚಿತ್ರದ ಸ್ಕ್ರಿಪ್ಟ್ ಕೊಟ್ಟಾಗ ನನ್ನಿಂದ ಇಂಥ ಸಿನಿಮಾ ಸಾಧ್ಯವಾ ಎಂಬ ಅನುಮಾನ ಮೂಡಿತ್ತು. ಆದರೆ, ಚಿತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಕಿರುತೆರೆಯ ಸೂಪರ್‍ಸ್ಟಾರ್ ಜೆಕೆ ಅಲಿಯಾಸ್ ಜಯಕೀರ್ತಿ.