ರೆಬಲ್‍ಸ್ಟಾರ್ ಅಂಬರೀಷ್ ಅವರಿಗೆ ಫಿಲಂಚೇಂಬರ್‍ನ ನೂತನ ಸದಸ್ಯರು, ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನ ಮಾಡಿದ್ದಾರೆ. ಫಿಲಂಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಕಾರ್ಯದರ್ಶಿಗಳಾದ ಬಾ.ಮಾ.ಹರೀಶ್, ಶಿಲ್ಪ ಶ್ರೀನಿವಾಸ್,ಸುಂದರ್ ರಾಜ್, ಉಪಾಧ್ಯಕ್ಷರಾದ ಕರಿಸುಬ್ಬು, ಕೆ.ಮಂಜು, ಖಜಾಂಚಿ ಕೆ.ಎಂ.ವೀರೇಶ್ ಅಂಬರೀಷ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಕಲಾವಿದರ ಸಂಘದ ಅಧ್ಯಕ್ಷ ಹಾಗೂ ಚಿತ್ರರಂಗದ ಹಿರಿಯ ನಟರಾಗಿರುವ ಅಂಬರೀಷ್ ನೂತನ ಸದಸ್ಯರಿಗೆ ಶುಭ ಹಾರೈಸಿದರು. ಫಿಲಂಚೇಂಬರ್‍ನ ಎದುರು ಇರುವ ಸವಾಲುಗಳು ಹಾಗೂ ಅವುಗಳಿಗೆ ತಮ್ಮ ಮೂಲಕ ನೀಡಬಹುದಾದ ಸಹಕಾರದ ಬಗ್ಗೆ ಮಾಹಿತಿ ಪಡೆದರು.