ನಿಖಿಲ್ ಕುಮಾರಸ್ವಾಮಿ. ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ. ಈಗಾಗಲೇ ಜಾಗ್ವಾರ್ ಚಿತ್ರದಲ್ಲಿ ಹೀರೋ ಆಗಿ ನಟಿಸಿ, ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯವಾಗಿ ಮಿಂಚಿರುವ ಯುವ ನಾಯಕ.
ಅಭಿಷೇಕ್ ಅಂಬರೀಷ್, ಕನ್ನಡ ಚಿತ್ರರಂಗದ ರೆಬಲ್‍ಸ್ಟಾರ್ ಅಂಬರೀಷ್ ಅವರ ಏಕೈಕ ಪುತ್ರ. ಚಿತ್ರರಂಗ ಪ್ರವೇಶಕ್ಕೆ ರೆಡಿಯಾಗಿರುವ ಅಭಿಷೇಕ್, ಅಮರ್ ಚಿತ್ರದಲ್ಲಿ ಬ್ಯುಸಿ.
ಈ ಇಬ್ಬರೂ ಈಗ ಪರಸ್ಪರ ಭೇಟಿಯಾಗಿರುವುದು ಕುತೂಹಲದ ಬೆಳವಣಿಗೆ. ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರದ ಸೆಟ್‍ಗೆ ಅಭಿಷೇಕ್ ದಿಢೀರ್ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ.
ಫೋಟೋವನ್ನು ಸ್ವತಃ ಹಂಚಿಕೊಂಡಿರುವ ನಿಖಿಲ್ ಅಭಿಷೇಕ್ ಅವರನ್ನು ಭೇಟಿ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ.