ರ್ಯಾಂಬೋ 2. ಈ ವರ್ಷದ ಮತ್ತೊಂದು ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಬಾಕ್ಸಾಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸಿನಿಮಾ, ಯಶಸ್ವಿಯಾಗಿ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಟಗರು ನಂತರ ಈ ವರ್ಷ ದೊಡ್ಡಮಟ್ಟದ ಸಕ್ಸಸ್ ಕಂಡ ಸಿನಿಮಾ ರ್ಯಾಂಬೋ2. ವಿದೇಶಗಳಲ್ಲಿಯೂ ಯಶಸ್ವಿಯಾಗಿರುವ ಸಿನಿಮಾ, ಶತದಿನೋತ್ಸವ ಪೂರೈಸಿದರೂ ಅಚ್ಚರಿಯಿಲ್ಲ.
ಶರಣ್, ಆಶಿಕಾ ರಂಗನಾಥ್, ರವಿಶಂಕರ್, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಿನಿಮಾಗೆ ಅನಿಲ್ ಕುಮಾರ್ ನಿರ್ದೇಶನವಿತ್ತು. ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿದ್ದರು. ತಂತ್ರಜ್ಞರೇ ನಿರ್ಮಾಪಕರಾಗಿದ್ದ ಸಿನಿಮಾ ಭರ್ಜರಿಯಾಗಿ ಗೆದ್ದಿದೆ.
ಚಿತ್ರಲೋಕ ಡಾಟ್ ಕಾಮ್ ಮೂಲಕ ಅಭಿಮಾನಿಗಳ ಜೊತೆ ನೇರವಾಗಿ ಮಾತನಾಡಿದ ಚಿತ್ರದ ನಾಯಕ ಶರಣ್, ಚಿತ್ರವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.