` ಅನುಪಮಾ ಗೌಡ.. ಬೋಲ್ಡ್ & ಬ್ಯೂಟಿಫುಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
aa karala ratri team
Dayal, Anupama Gowda Image

ಆ ಕರಾಳ ರಾತ್ರಿ. ಮುಂದಿನ ವಾರ ತೆರೆಗೆ ಬರುತ್ತಿರುವ ಸಿನಿಮಾ. ಚಿತ್ರದ ನಾಯಕಿ ಅನುಪಮಾ ಗೌಡ. ಅಕ್ಕ ಸೀರಿಯಲ್ ಖ್ಯಾತಿಯಿಂದ ಬಿಗ್‍ಬಾಸ್ ಮನೆ ಸೇರಿದ್ದ ಅನುಪಮಾ ಗೌಡಗೆ, ಬಿಗ್‍ಬಾಸ್ ಮನೆಯಲ್ಲಿಯೇ ಈ ಚಿತ್ರದ ಆಫರ್ ಸಿಕ್ಕಿತ್ತು. ಆಗ ಬಿಗ್‍ಬಾಸ್ ಮನೆಯಲ್ಲಿಯೇ ಇದ್ದ ದಯಾಳ್, ಅಲ್ಲಿಯೇ ಕಥೆ ಹೇಳಿ ಅನುಪಮಾ ಗೌಡ ಹಾಗೂ ಜೆಕೆ ಅವರನ್ನು ಕಮಿಟ್ ಮಾಡಿಸಿದ್ದರು. ಅದರಂತೆಯೇ ಎಲ್ಲರೂ ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಶುರುವಾದ ಸಿನಿಮಾ ಆ ಕರಾಳ ರಾತ್ರಿ.

ಚಿತ್ರದಲ್ಲಿ ನನ್ನದು ಸಿಕ್ಕಾಪಟ್ಟೆ ಬೋಲ್ಡ್ ಕ್ಯಾರೆಕ್ಟರ್. ಪಾತ್ರದ ಸಂಭಾಷಣೆಯೂ ಸಿಕ್ಕಾಪಟ್ಟೆ ಖಡಕ್. ಡೈರೆಕ್ಟ್ ಹಿಟ್. ಸಿನಿಮಾದ ನಟನೆಯನ್ನೇ ಬಿಡಬೇಕು ಎಂದುಕೊಂಡಿದ್ದವಳಿಗೆ `ಆ ಕರಾಳ ರಾತ್ರಿ'ಯ ಸ್ಕ್ರಿಪ್ಟ್ ತುಂಬಾ ಹಿಡಿಸಿತು. ಮುಂದೆ ನನಗೆ ಇಂಥಾ ಪಾತ್ರ ಸಿಗುವುದೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿಕೊಂಡಿದ್ಧಾರೆ ಅನುಪಮಾ ಗೌಡ.

ಚಿತ್ರದಲ್ಲಿರುವುದು ನಾಲ್ಕೇ ಪಾತ್ರ. ಆದರೆ, ಪ್ರೇಕ್ಷಕ ಆ ಪಾತ್ರಗಳ ಜೊತೆಯಲ್ಲೇ ತಾನೂ ಸಾಗುತ್ತಾನೆ. ದಯಾಳ್ ಆ ರೀತಿ ಕಥೆ ಹೇಳಿದ್ದಾರೆ ಅನ್ನೋದು ಅನುಪಮಾ ಅವರು ದಯಾಳ್ ಅವರಿಗೆ ಕೊಡೋ ಸರ್ಟಿಫಿಕೇಟ್.