ಗಣೇಶ್ ಎಂದರೆ ನಗು, ಕಾಮಿಡಿ, ಗಣೇಶ್ ಎಂದರೆ ಲವ್, ರೊಮ್ಯಾನ್ಸ್.. ಗಣೇಶ್ ಚಿತ್ರಗಳೆಂದರೆ ಇಂಪಾದ ಹಾಡು, ಕಣ್ಣು ತಂಪಾಗಿಸುವ ಹಸಿರು.. ಆದರೆ, ಇಂತಿಪ್ಪ ಗಣೇಶ್ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡೋಕೆ ಹೊರಟಿದ್ದಾರೆ. ನಾಗಣ್ಣ ನಿರ್ದೇಶನದಲ್ಲಿ ಹಾರರ್ ಸಿನಿಮಾ ಮಾಡೋಕೆ ಗಣೇಶ್ ಒಪ್ಪಿಕೊಂಡುಬಿಟ್ಟಿದ್ದಾರೆ.
ಇಷ್ಟಕ್ಕೂ ಗಣೇಶ್ ಇಂಥಾದ್ದೊಂದು ಹಾರರ್ ಸಿನಿಮಾ ಮಾಡೋಕೆ ಕಾರಣ ಅವರ ಮಗಳಂತೆ. ಗಣೇಶ್ ಇವತ್ತಿಗೂ ಒಬ್ಬನೇ ಕುಳಿತು ಹಾರರ್ ಸಿನಿಮಾ ನೋಡಲ್ಲ. ಅಂಥಾದ್ದರಲ್ಲಿ ಹಾರರ್ ಸಿನಿಮಾದಲ್ಲಿ ನಟಿಸ್ತಾರೆ ಅಂದ್ರೆ ಅದಕ್ಕೆ ಕಾರಣ ಅವರ ಮಗಳ ಡಿಮ್ಯಾಂಡು. ಮಗಳಿಗೆ ಹಾರರ್ ಚಿತ್ರಗಳೆಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ ಅಪ್ಪನೂ ಹಾರರ್ ಸಿನಿಮಾ ಮಾಡಬೇಕು ಎಂದು ದುಂಬಾಲು ಬಿದ್ದಿದ್ದಾಳೆ. ಅದೇ ಸಮಯಕ್ಕೆ ನಾಗಣ್ಣನವರ ಕಡೆಯಿಂದ ಕಥೆ ಸಿಕ್ಕಿದೆ. ಗಣೇಶ್ ಓಕೆ ಎಂದುಬಿಟ್ಟಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ಇದನ್ನೆಲ್ಲ ಹಂಚಿಕೊಂಡಿದ್ದಾರೆ ಗಣೇಶ್. ಅಫ್‍ಕೋರ್ಸ್.. ಮಗಳ ಆಜ್ಞೆಯನ್ನು ನಿರಾಕರಿಸುವ ಅಪ್ಪ ಯಾವನಿದ್ದಾನು ಜಗದಲ್ಲಿ...