ನೂತನ್ ಉಮೇಶ್ ನಿದೇಶನದ ವಿನೋದ್ ಪ್ರಭಾಕರ್ ಅಭಿನಯದ ಹೊಸ ಸಿನಿಮಾದ ಟೈಟಲ್ ಫೈನಲ್ ಆಗಿದೆ. ಚಿತ್ರದ ಹೆಸರು ಫೈಟರ್. ಕಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣದ ಚಿತ್ರಕ್ಕೆ ಫೋಟೋಶೂಟ್ ಕೂಡಾ ಆಗಿದೆ.
ಹೆಸರೇ ಹೇಳುವಂತೆ ಇದೊಂದು ಪಕ್ಕಾ ಮಾಸ್ ಎಂಟರ್‍ಟೈನರ್. ಜಬರ್‍ದಸ್ತ್ ಆ್ಯಕ್ಷನ್, ಔಟ್ ಅಂಡ್ ಔಟ್ ಕಾಮಿಡಿ, ಸೆಂಟಿಮೆಂಟ್, ಲವ್ ಎಲ್ಲವೂ ಚಿತ್ರದಲ್ಲಿ ಹದವಾಗಿ ಇರಲಿದೆ ಅನ್ನೋದು ನಿರ್ದೇಶಕ ಉಮೇಶ್ ಅವರ ಭರವಸೆ.
ಜುಲೈ 5ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು, ಬೆಂಗಳೂರು ಹಾಗೂ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆಯಲಿದೆ.