` ಮಂಡ್ಯದ ಹುಡುಗ 6ನೇ ಮೈಲಿ ನಿರ್ದೇಶಕನಾಗಿದ್ದು ಹೇಗೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
6ne malli director experience with film industry
ne Malli Director's exoerience

6ನೇ ಮೈಲಿ ನಿರ್ದೇಶಕರ ಹೆಸರು ನಾನಿ. ಇದು ಅವರ ಮೊದಲ ಸಿನಿಮಾ. ಆದರೆ, ಅವರಿಗೆ ಈ ನಿರ್ದೇಶನದ ಅವಕಾಶ ಸರಳವಾಗಿ ಸಿಕ್ಕಿದ್ದೇನಲ್ಲ. ಹೆಜ್ಜೆ ಹೆಜ್ಜೆಗೂ ಹೋರಾಡಿ ಗಿಟ್ಟಿಸಿಕೊಂಡ ಅವಕಾಶ ಈ 6ನೇ ಮೈಲಿ. ಇದು ನಾನಿ ಕಥೆ.

ಮೂಲತಃ ಮಂಡ್ಯದವರಾದರೂ, ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲೇ. ಕಾಲೇಜು ಬಿಟ್ಟರೂ, ಬಯ್ಯದೇ ಪ್ರೋತ್ಸಾಹಿಸಿದ ಫ್ಯಾಮಿಲಿ ಅವರದ್ದು. ಬ್ಯುಸಿನೆಸ್ ಮಾಡುತ್ತಿದ್ದ ನಾನಿಯನ್ನು ಸೆಳೆದಿದ್ದು ರಂಗನಾಟಕಗಳು. ಅವುಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದ ನಾನಿ, ನನ್ನ ಜೊತೆ ಕೆಲಸ ಮಾಡಿದವರಲ್ಲಿ ಹಲವರು ಈಗ ಸ್ಯಾಂಡಲ್‍ವುಡ್‍ನಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ ಎಂದು ಹೇಳಿಕೊಳ್ತಾರೆ ನಾನಿ.  ಇಷ್ಟಿದ್ದರೂ ಅವರಿಗೆ ಸಿನಿಮಾ ಮಾಡಬಲ್ಲೆ, ಕಥೆಯನ್ನು ಚೆನ್ನಾಗಿ ಹೇಳಬಲ್ಲೆ ಎಂಬ ಕಾನ್ಫಿಡೆನ್ಸ್ ಮೂಡಿಸಿದ್ದು ಶಿವರಾಜ್‍ಕುಮಾರ್ ಅಂತೆ.

ನಾನಿ ಮೊದಲು ಕಥೆ ಹೇಳಿದ್ದೇ ಶಿವರಾಜ್‍ಕುಮಾರ್ ಅವರಿಗೆ. ನಾನು ಹೊಸಬನಾದರೂ, ಶಿವರಾಜ್‍ಕುಮಾರ್, ಇಡೀ ಕಥೆಯನ್ನು ಕೇಳಿದರು. ಇಷ್ಟಪಟ್ಟರು. ಆದರೆ, ಬೇರೆ ಬೇರೆ ಕಾರಣಗಳಿಂದ ಆ ಸಿನಿಮಾ ಟೇಕಾಫ್ ಆಗಲಿಲ್ಲ. ಆದರೆ, ಶಿವರಾಜ್ ಕುಮಾರ್ ಅವರಿಗೆ ಕಥೆ ಹೇಳಿದ್ದು ಹಾಗೂ ಅವರು ಗಂಟೆಗಟ್ಟಲೆ ಕೂತು ಕಥೆ ಕೇಳಿದರಲ್ಲ, ಅದು ನನಗೆ, ನನಗೂ ಕಥೆ ಹೇಳುವ ಶೈಲಿ ಗೊತ್ತಿದೆ ಎಂಬ ಕಾನ್ಫಿಡೆನ್ಸ್ ಕೊಟ್ಟಿತು ಎಂದು ಅನುಭವ ಬಿಚ್ಚಿಡ್ತಾರೆ ನಾನಿ.

ಅದಾದ ಮೇಲೆ ಹಲವು ಸರ್ಕಸ್ಸುಗಳಾದವು. ಕೊನೆಗೆ ಪಲ್ಲವಿ ಟಾಕೀಸ್ ಅನ್ನೋ ಸಿನಿಮಾ ಟೇಕಾಫ್ ಆಯ್ತು. ಅದೇನಾಯ್ತೋ ಏನೋ.. ಶೂಟಿಂಗ್ ಮುಗಿಸಿದ ಸಿನಿಮಾ, ಹೊರ ಬರಲೇ ಇಲ್ಲ. ಅದೇ ವೇಳೆ ಪರಿಚಯವಾದವರು ಡಾ.ಶೈಲೇಂದ್ರ ಕುಮಾರ್.

ಕಥೆ ಕೇಳಿದ 3 ದಿನಗಳ ನಂತರ, ಶೈಲೇಂದ್ರ ಕುಮಾರ್ ಸಿನಿಮಾ ನಿರ್ಮಿಸೋಕೆ ಓಕೆ ಎಂದರು. ಈಗ ಸಿನಿಮಾ ಸಿದ್ಧವಾಗಿದೆ. ಕನ್ನಡ ಚಿತ್ರಗಳು ತಾಂತ್ರಿಕವಾಗಿ ಅದ್ಭುತ ಅಲ್ಲ ಎನ್ನುವವರಿಗೆ ಈ ಸಿನಿಮಾ ಚಾಲೆಂಜ್. ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ 6ನೇ ಮೈಲಿ ಎಂದು ವಿಶ್ವಾಸದಿಂದ ಹೇಳ್ತಾರೆ ನಾನಿ. ಥ್ರಿಲ್ಲಾಗೋಕೆ ಜುಲೈ 6ರವರೆಗೆ ಕಾಯಿರಿ.

Matthe Udbhava Trailer Launch Gallery

Maya Bazaar Pressmeet Gallery